ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಾಳೆಯಿಂದ ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ಜಾತ್ರೆ

Srinivasa Murthy VN
Updated On : 10 Mar 2014, 1:50 am

ಹುಳಿಯಾರು: ಹೋಬಳಿ ಕಾರೇಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ  ಭಾರಿ ದನಗಳ ಜಾತ್ರೆ   ಸೋಮವಾರದಿಂದ ಹತ್ತು ದಿನಗಳ ಕಾಲ ನಡೆಯಲಿದೆ. ಮಾ.11ರಂದು ಮಾರುಹೊಳೆ ಗ್ರಾಮಸ್ಥರಿಂದ ಸ್ವಾಮಿಗೆ ಕಂಕಣ, ಅಂಕುರಾರ್ಪಣೆ, ಉಯ್ಯಾಲೋತ್ಸವ, ಮಾ. 12ರಂದು ಗಾಣಧಾಳು ಗ್ರಾಮಸ್ಥರಿಂದ ಗಜಾರೋಹಣ, ಮಾ. 13ರ ರಾತ್ರಿ ಗರುಡವಾಹನೋತ್ಸವ, ಮಾ.14ರಂದು ಸ್ವಾಮಿಯ ವೈಭವದ ಬ್ರಹ್ಮರಥೋತ್ಸವ ನಡೆಯಲಿದೆ.  ನಂತರ ಅನ್ನಸಂತರ್ಪಣೆ ಹಾಗೂ ಅದೇ ದಿನ ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ. ಮಾ.15ರಂದು ಅಡ್ಡಪಲ್ಲಕ್ಕಿ ಉತ್ಸವ, ಮಾ.16ರಂದು ಮಂಗಳಸ್ನಾನ, ಶಯನೋತ್ಸವ, ಮಾ.17ರ ರಾತ್ರಿ ಸರ್ಪವಾಹನೋತ್ಸವ, ಮಾ.18ರ ರಾತ್ರಿ ಚಂದ್ರಮಂಡಲೋತ್ಸವ, ಮಾ.19ರ ರಾತ್ರಿ ಪುಷ್ಪವಾಹನೋತ್ಸವ, ಮಾ.20ರ ರಾತ್ರಿ ಸೂರ್ಯಮಂಡಲೋತ್ಸವ, ಮಾ. 21ರಂದು ಬೆಳಿಗ್ಗೆ ಪಂಚಾಮೃತಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.  ಅಲ್ಲದೆ ಜಾತ್ರೆಯ ಪ್ರತಿ ದಿನವೂ ಅನ್ನಸಂತರ್ಪಣೆ ಹಾಗೂ ದನಗಳ ಜಾತ್ರೆ  ನಡೆಯುಲಿದ್ದು, ತುಮಕೂರು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ರಾಸುಗಳನ್ನು ಕೊಳ್ಳಲು, ಮಾರಾಟ ಮಾಡಲು ಆಗಮಿಸಲಿದ್ದಾರೆ.

ಉತ್ತಮ ಪರಿಸರದಿಂದ ಆರೋಗ್ಯ
ಶಿರಾ: ಐಷಾರಾಮಿ ಜೀವನ ಶೈಲಿಗೆ ಮಾರು ಹೋಗದೆ, ಸರಳ ಜೀವನ ಪದ್ಧತಿ  ಜೊತೆಗೆ ತಾವು ವಾಸಿಸುವ  ಮನೆಯ ಸುತ್ತ ಮುತ್ತ  ಉತ್ತಮ ಪರಿಸರ ನಿರ್ಮಾಣ ಮಾಡಿದಾಗ ಮಾತ್ರ ಉತ್ತಮ ಆರೋಗ್ಯ ಸಾಧ್ಯವೆಂದು ಎಸ್‌ಒಎಆರ್ ಫೌಂಡರ್ ಡ್ಯಾನಿ ಹೇಳಿದರು.
ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಸ್‌ಒಎಆರ್-180 ಬೆಂಗಳೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.  ವೈದ್ಯಾಧಿಕಾರಿ ಡಾ.ಶ್ರೀಕಾಂತ್ ಮಾತನಾಡಿ  ಜೀವನದಲ್ಲಿ ಉಲ್ಲಾಸ ಹಾಗೂ ಸಂಬಂಧಗಳು ಚೆನ್ನಾಗಿದ್ದರೆ ರೋಗ ಮುಕ್ತ ಜೀವನ ಸಾಧ್ಯವೆಂದರು. ಡಾ.ಲಿಂಟಾ, ಡಾ.ಜಿಂಟೋ, ಡಾ. ಫ್ಯಾಟರಿಕ್ ಸೇರಿದಂತೆ ಹಲವಾರು ವೈದ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement