ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ದೇಗುಲ ಸಮಾಜ ಒಳಿತಿನ ಪ್ರತಿಬಿಂಬ'

Srinivasa Murthy VN
Updated On : 10 Mar 2014, 11:41 am

ಕಿಕ್ಕೇರಿ: ಧರ್ಮದ ಸೈದ್ಧಾಂತಿಕ ತತ್ವದ ಮೇಲೆ ನಿಂತಿರುವ ದೇಶದಲ್ಲಿ ಶಾಂತಿ, ನೆಮ್ಮದಿ ಕಾಣಲು ಸದೃಢ ಮನಸ್ಸಿನವರು ದೇಗುಲ, ಧ್ಯಾನ ಮಂದಿರ ನಿರ್ಮಿಸಲು ಮುಂದಾಗಬೇಕೆಂದು ಹಿರೇ ಮೈಲಾರದ ಮೈಲಾರಲಿಂಗ ದೇಗುಲ ದೇಗುಲದ ಪೀಠಾಧ್ಯಕ್ಷ ವೆಂಕಪ್ಪ ಒಡೆಯರ್ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಉದ್ದಿನಬೋರೆ ಕಾವಲು ಒಂಟಿ ಮನೆ ಬಳಿ ನಿರ್ಮಿಸಲು ಉದ್ಧೇಶಿರುವ ಬಾಬಾ ಸದ್ಗುರು ಸದಾನಂದ ಮಹಾರಾಜರವರ ದತ್ತಪೀಠ, ಧ್ಯಾನಮಂದಿರ ಕುರಿತು ಅವರು ಮಾತನಾಡಿದರು.
ಕೋಡಿಹಳ್ಳಿ ನಂಜುಂಡೇಗೌಡ ಮಾತನಾಡಿ, ಈ ಪ್ರದೇಶವನ್ನು ಧಾರ್ಮಿಕ ಕ್ಷೇತ್ರವಾಗಿಸಬೇಕಾಗಿರುವ ಹಂಬಲವಿದೆ. ಕನಕರ ಹೆಸರಿನಲ್ಲಿ ಉಚಿತ ವಿವಾಹ, ಕನಕೋತ್ಸವ ನಡೆಸುತ್ತಿದ್ದು ಮುಂದಿನ ದಿನದಲ್ಲಿ ವೃದ್ಧಾಶ್ರಮ ಆರಂಭಿಸುವ ಬಯಕೆ ವ್ಯಕ್ತಪಡಿಸಿದರು. ಪ್ರಾಧ್ಯಾಪಕ ಡಾ.ನಾಗಣ್ಣ, ವಾಸ್ತುಶಿಲ್ಪಿ ಸತೀಶ್, ಕೆ.ಜೆ.ನಾರಾಯಣ್, ಕನಕಪುರ ನಾರಾಯಣ ದಂಪತಿ, ಶಿವಣ್ಣ, ರಾಜೇಶ್, ಸೋಮನಹಳ್ಳಿ ಜನಾರ್ದನ ಪಟೇಲ್, ಸ್ಟುಡಿಯೋ ದೇವರಾಜು ಮತ್ತಿತರರು ಉಪಸ್ಥಿತರಿದ್ದರು.

ಚುಂಚನಗಿರಿ ಜಾತ್ರೆಗೆ ಪಾದಯಾತ್ರೆ
ಭಾರತೀನಗರ: ಆದಿಚುಂಚನಗಿರಿ ಕಾಲಬೈರೇಶ್ವರ ಸ್ವಾಮಿ ಒಕ್ಕಲಿನವರು ಮಳವಳ್ಳಿಯಿಂದ ಭಾರತೀನಗರ ಮೂಲಕ ಆದಿಚುಂಚನಗಿರಿ ಮಠದಲ್ಲಿ ನಡೆಯುವ ಜಾತ್ರೆಗೆ ಪಾದಯಾತ್ರೆ ಮೂಲಕ ತೆರಳಿದರು.
ಪೂಜಾ ಕುಣಿತ, ಹುಲಿವೇಷ ಸೇರಿದಂತೆ ಜಾನಪದ ಕಲಾತಂಡದೊಂದಿಗೆ ಆಟೋದಲ್ಲಿ ಕಲಾಬೈರವೇಶ್ವರ, ದಿ.ಬಾಲಗಂಗಾಧರನಾಥಸ್ವಾಮೀಜಿ ಹಾಗೂ ನಿರ್ಮಲಾನಂದನಾಥಸ್ವಾಮೀಜಿ ಭಾವಚಿತ್ರವನ್ನು ಮೆರವಣಿಗೆ ಮೂಲಕ ಭಾರತೀನಗರಕ್ಕೆ ಕರೆತರಲಾಯಿತು. ದಾರಿಯುದ್ದಕ್ಕೂ ಭಕ್ತರು ದೇವರಿಗೆ ವಿಶೇಷಪೂಜೆ ಸಲ್ಲಿಸಿ ನಮಿಸಿದರು. ಅರೆಚಾಕನಹಳ್ಳಿ ಅಂದಾನಿ, ಅಂಗಡಿ ಅಂದಾನಿ, ಪೂಜಾಕುಣಿತ ಕಲಾವಿದ ಸಿದ್ದೇಗೌಡ ಶಂಕರ್, ಬೊಪ್ಪಸಮುದ್ರದ ಗವಿಸಿದ್ದ, ಮಳವಳ್ಳಿ ಬೋರಯ್ಯ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement