ಬೈಕ್- ಮಿನಿ ಬಸ್ ಡಿಕ್ಕಿ: ದಂಪತಿ ಸಾವು
ಪಾವಗಡ: ಬೈಕ್ ಹಾಗೂ ಮಿನಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ತಾಲೂಕಿನ ದಂಪತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಕೊರಟಗೆರೆ ತಾ.ಉರ್ಡುಗೆರೆ ಸಮೀಪ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರು ಪಾವಗಡ ತಾಲೂಕಿನ ದವಡಬೆಟ್ಟ ಗ್ರಾಮದ ವಾಸಿಗಳಾದ ಗ್ರಾಪಂ ಮಾಜಿ ಅಧ್ಯಕ್ಷ ಪಳ್ಳಳಪ್ಪ (52) ಹಾಗೂ ಆತನ ಪತ್ನಿ ಸಣ್ಣಮ್ಮ (45) ಎಂಬುವರು.
ತಾಲೂಕಿನ ದವಡಬೆಟ್ಟ ಗ್ರಾಮದ ಪಳಳ್ಳಪ್ಪ ಎಂಬುವರು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಕಳೆದ 2 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದರೆನ್ನಲಾಗಿದ್ದು ತಮ್ಮ ಗ್ರಾಮಕ್ಕೆ ಬರುವ ಸಲುವಾಗಿ ಮಧ್ಯಾಹ್ನ ಬೆಂಗಳೂರಿನಿಂದ ಪಲ್ಸರ್ ಬೈಕಿನಲ್ಲಿ ಪತ್ನಿ ಸಮೇತ ಹೊರಾಟಿದ್ದಾರೆ. ಬೆಂಗಳೂರಿನ ಹೈವೆ ರಸ್ತೆಯಲ್ಲಿ ಪಾವಗಡ ಮಾರ್ಗವಾಗಿ ಬರುತ್ತಿರುವಾಗ ಬೆಂಗಳೂರಿನ ಕಡೆ ತೆರಳುತ್ತಿದ್ದ ಮಿನಿಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಳ್ಳಳಪ್ಪ ಹಾಗೂ ಪತ್ನಿ ಸಣ್ಣಮ್ಮ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದಿದೆ. ಸಮೀಪಜದ ಉರ್ಡುಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿಯುತ್ತಿದಂತೆ ತಾ.ಗುಜ್ಜನಡು ತಾಪಂ ಸದಸ್ಯೆ ನರಸಮ್ಮ ಓಬಳಪತಿ, ದವಡಬೆಟ್ಟ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಚಿತ್ತಪ್ಪ, ಮಾರಪ್ಪ ಹಾಗೂ ಗ್ರಾಪಂ ಸದಸ್ಯ ಪೂಜಾರಪ್ಪ ಮುಖಂಡ ರಾಜ್ಕುಮಾರ್ ಇತರರು ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿ ಸ್ಥಳಕ್ಕೆ ಭೇಟಿ ನೀಡಿದರು. ಅವರಿಗೆ 1ಹೆಣ್ಣು ಮತ್ತು 2 ಗಂಡು ಮಕ್ಕಳಿದ್ದಾರೆ.
4 ಅಂಗಡಿಗೆ ಆಕಸ್ಮಿಕ ಬೆಂಕಿ: ಸಂಪೂರ್ಣ ಭಸ್ಮ
ಹುಳಿಯಾರು: ಬೆಂಕಿ ಅನಾಹುತದಲ್ಲಿ 4 ಅಂಗಡಿಗಳಿಗೆ ಬೆಂಕಿ ತಗುಲಿ ಸಾಮಾನು ಸರಂಜಾಮು ಸಹಿತ ಬೆಂದು ಹೋದ ಘಟನೆ ಹೋಬಳಿಯ ಹೊಯ್ಸಳಕಟ್ಟೆ ಕ್ರಾಸಿನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ. ಮುಂಜಾನೆ ಐದೂವರೆ ಸುಮಾರಿಗೆ ರಸ್ತೆ ಬದಿಯಲ್ಲಿದ್ದ ಪೆಟ್ಟಿಗೆ ಅಂಗಡಿಗಳಿಗೆ ಬೆಂಕಿ ತಗುಲಿ ಪ್ರಕರಣದಲ್ಲಿ ಗೋವಿಂದಪ್ಪನವರ ಹೋಟೆಲ್, ನರೇಂದ್ರ ಎಂಬುವವರ ಕೋಳಿ ಅಂಗಡಿ ಮೊಬೈಲ್ ಅಂಗಡಿ, ಇಸ್ಮಾಯಿಲ್ ಎಂಬುವವರ ಕೋಳಿ ಅಂಗಡಿಗಳಿಗೆ ಬೆಂಕಿ ತಾಗಿ ಭಸ್ಮವಾಗಿದೆ.