ಕೃಷಿ ಲಾಭವಲ್ಲ ಎಂಬ ಮನೋಭಾವದಿಂದ ರೈತರು ಹೊರಬರಲಿ
ಕನ್ನಡಪ್ರಭ ವಾರ್ತೆ, ಹೆಬ್ಬೂರು, ಮಾ.13
ಕೃಷಿ ಲಾಭದಾಯಕವಲ್ಲ ಎಂಬ ಮನೋಭಾವದಿಂದ ರೈತರು ಹೊರಬರಬೇಕು ಎಂದು ನಿವೃತ್ತ ತೋಟಗಾರಿಕೆ ಅಧೀಕ್ಷಕ ತಿಮ್ಮಪ್ಪ ಅಭಿಪ್ರಾಯಪಟ್ಟರು.
ಅವರು ತುಮಕೂರು ಸಮೀಪದ ಹೆಬ್ಬೂರಿನ ಗಣಪತಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಕೃಷಿ ವಿಚಾರ ಸಂಕಿರಣ ಹಾಗೂ ಸಾಧನ ಸಮಾವೇಶದಲ್ಲಿ ಮಾತನಾಡಿದರು.
ಏಕದಳ ಬೆಳೆ ಪದ್ಧತಿ ಹಾಗೂ ರಾಸಾಯನಿಕ ಬಳಕೆ ಮಾಡುವುದನ್ನು ಸ್ಥಗಿತಗೊಳಿಸಿ ಸಮೃದ್ಧಿ ಕೃಷಿ ನೀತಿಯನ್ನು ಅಳವಡಿಸಿಕೊಂಡರೆ ಯಾವುದೇ ನಷ್ಟ ಉಂಟಾಗುವುದಿಲ್ಲ.
ಆದರೆ ಹಳೆಯ ಪದ್ಧತಿಗಳನ್ನು ರೈತರು ಕೃಷಿಯಲ್ಲಿ ಅಳವಡಿಸಿ ನಷ್ಟ ಅನುಭವಿಸಿದ್ದಾರೆ.
ಸಕಾಲದಲ್ಲಿ ಮಳೆ ಆಗದೇ ಇರುವುದು ಕೃಷಿಯತ್ತ ರೈತರು ಬೇಸರಗೊಂಡಿದ್ದಾರೆ ಎಂದರು.
ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ರೈತರು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು. ಕೃಷಿ ಅಧಿಕಾರಿ ಶ್ರೀಕಂಠಯ್ಯ ಮಾತನಾಡಿ ರೈತರು ತಮ್ಮ ಜಮೀನಿನಲ್ಲಿ ನೀರು ಹಾಗೂ ಮಣ್ಣನ್ನು ಸಂಗ್ರಹಿಸಿ ರಾಸಾಯನಿಕದಿಂದ ದೂರು ಉಳಿದು ರಸಗೊಬ್ಬರಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಹಸಿರು ಎಲೆ ಹಾಗೂ ಕಟ್ಟಿಗೆ ಗೊಬ್ಬರ ಸೇರಿದಂತೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕರಾದ ಮಾಧವಮೂರ್ತಿ, ಪಿಎಸ್ಐ ಸಿದ್ದರಾಜು ಹಾಗೂ ರೈತ ಮುಖಂಡರು ಹಾಜರಿದ್ದರು.