ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೀರಿಗಾಗಿ ಪಂಚಾಯ್ತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Srinivasa Murthy VN
Updated On : 14 Mar 2014, 12:55 pm

ಹುಳಿಯಾರು: ಕಳೆದ ಒಂದು ತಿಂಗಳಿಂದ ಸರಿಯಾಗಿ ಕುಡಿಯುವ ನೀರು ಬೀಡುತ್ತಿಲ್ಲ, ನೀರುಗಂಟಿಯನ್ನು ಕೇಳಿದರೆ ಬರಿ ಸಬೂಬು ಹೇಳುತ್ತಿದ್ದು, ಗ್ರಾ.ಪಂ.ಸದಸ್ಯರಾಗಲಿ, ಅಧ್ಯಕ್ಷರಾಗಲಿ ಈ ಬಗ್ಗೆ ಗಮನ ಕೊಡದೆ ಮೌನವಹಿಸಿದ್ದಾರೆಂದು ಆರೋಪಿಸಿ ಕೆಂಕೆರೆ ಗ್ರಾಮ ಪಂಚಾಯ್ತಿಯ ಕೆಲ ಗ್ರಾಮಸ್ಥರು ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಗುರುವಾರ ನಡೆಯಿತು.
 ಪಂಚಾಯ್ತಿಗೆ ಮುತ್ತಿಗೆಹಾಕಿದ ಜನರು ನಮಗೆ ಕಳೆದ ಒಂದು ತಿಂಗಳಿಂದ ಕುಡಿಯಲು ನೀರು ಬಿಡದೆ ಮೋಟರ್ ಸರಿಯಿಲ್ಲ, ಬೋರಲ್ಲಿ ನೀರಿಲ್ಲ ಎಂಬ ಸಬೂಬು ಹೇಳುತ್ತಾ, ನೀರು ಬಿಡದಿರುವುದರಿಂದ ದಿನನಿತ್ಯ ಕುಡಿಯುವ ಹಾಗೂ ಬಳಕೆ ನೀರಿಗಾಗಿ ಪರಿತಪಿಸುವಂತಾಗಿದೆ.
 ಗ್ರಾಮಪಂಚಾಯ್ತಿಗೆ ಬರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡದೆ ತಮಗೆ ಇಷ್ಟಬಂದ ರೀತಿಯಲ್ಲಿ ಬಳಸುತ್ತಿದ್ದಾರೆ. ಓಟು ಕೇಳುವಾಗ ಮಾತ್ರ ಮನೆ ಬಾಗಿಲಿಗೆ ಬರುವ ಸದಸ್ಯರುಗಳು ಈಗ ನಮಸ್ಯೆಗೆ ಸ್ಪಂದಿಸದೇ ಎಲ್ಲೊ ಕುಳಿತ್ತಿದ್ದಾರೆ ಎಂದು ದೂರಿದರು.
 ವಿಷಯ ತಿಳಿದು  ಪಂಚಾಯ್ತಿಗೆ ಬಂದ ಅಧ್ಯಕ್ಷೆ ಪೂರ್ಣಿಮಾ, ಪಿಡಿಓ ಶಿವಕುಮಾರ್ ಅವರ ಮುಂದೆ  ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಯನ್ನು ತೆರೆದಿಟ್ಟು, ನಮಗೆ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಪಟ್ಟು ಹಿಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು ಇನ್ನೂ ಒಂದು ವಾರದೊಳಗಾಗಿ ಸಮರ್ಪಕವಾಗಿ ನೀರು ಬಿಡಿಸುವುದಾಗಿ ತಿಳಿಸಿ ಪ್ರತಿಭಟನಾಕಾರರನ್ನು ಸಮಧಾನಪಡಿಸಿದರು. ಸದಸ್ಯ ಬಸವರಾಜು, ಮಹೇಶ್, ಭದ್ರೇಶ್, ಲೋಕೇಶ್, ಗೋವಿಂದ್, ಚನ್ನಬಸವಯ್ಯ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement