ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಲ್ಲಿಕಾರ್ಜುನಯ್ಯ ನಿಧನಕ್ಕೆ ಸಿದ್ಧಗಂಗಾ ಶ್ರೀ ಸಂತಾಪ

Srinivasa Murthy VN
Updated On : 14 Mar 2014, 12:56 pm

ತುಮಕೂರು: ಎಸ್. ಮಲ್ಲಿಕಾರ್ಜುನಯ್ಯ ನಿಧನರಾದರೆಂಬ ಸುದ್ದಿ  ತಿಳಿದು ಅತೀವ ದುಃಖವಾಗಿದೆ ಎಂದು ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.ಶ್ರೀಯುತರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದರು.  ಲೋಕಸಭಾ ಸದಸ್ಯರಾಗಿ, ಉಪಸಭಾಪತಿಗಳಾಗಿ ಸೇವೆ ಸಲ್ಲಿಸಿದ ಶ್ರೀಯುತರು ಜನಾನುರಾಗಿಗಳಾಗಿದ್ದರು. ಸಜ್ಜನಿಕೆಯ, ಸುಸಂಸ್ಕೃತ ನಡವಳಿಕೆಗೆ ಹೆಸರುವಾಸಿಯಾಗಿದ್ದರು. ಸಾರ್ವಜನಿಕರೊಂದಿಗೆ ಅತ್ಯಂತ ಆತ್ಮೀಯವಾಗಿ ವ್ಯವಹರಿಸುತ್ತಿದ್ದರು. ಶ್ರೀಮಠದೊಂದಿಗೆ ಶ್ರೀಯುತರು ಅನನ್ಯ, ಭಕ್ತಿ ವಿಶ್ವಾಸಗಳನ್ನು ಇಟ್ಟುಕೊಂಡಿದ್ದು ನ್ಯಾಯವಾದಿಗಳಾಗಿ ಹೆಸರು ಮಾಡಿದ್ದರು. ಶ್ರೀಯುತರ ಅಗಲಿಕೆಯಿಂದ ಸಾರ್ವಜನಿಕ ಜೀವನಕ್ಕೆ ದೊಡ್ಡ ನಷ್ಟ ಉಂಟಾಗಿದೆಯೆಂದು ಭಾವಿಸಬೇಕಿದೆ. ಅವರ ಆತ್ಮಕ್ಕೆ ದಯಾಮಯನಾದ ಪರಶಿವನು ಚಿರಶಾಂತಿ ದಯಪಾಲಿಸಲೆಂದು ಆಶಿಸುತ್ತಾ ಅವರ ಅಗಲಿಕೆ ನೋವನ್ನು ಅವರ ಕುಟುಂಬದ ಸದಸ್ಯರು ಸರಿಸುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದ್ದಾರೆ.

ಇಂದು ಸಾಹಿತ್ಯ ಸಂಭ್ರಮ
ತುಮಕೂರು:
ಕಲ್ಪತರು ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಪ್ರೊ. ಸಿ.ಎಚ್. ಮರಿದೇವರು ಅವರ 80 ನೇ ಹುಟ್ಟುಹಬ್ಬದ ಪ್ರಯುಕ್ತ ಸಾಹಿತ್ಯ ಸಂಭ್ರಮ, ಕವಿಗೋಷ್ಠಿ ಕಾರ್ಯಕ್ರಮವನ್ನು ಮಾ. 14 ರಂದು ಮಧ್ಯಾಹ್ನ 3 ಗಂಟೆಗೆ ಸಿದ್ಧಗಂಗಾ ಡಿಇಡಿ ಕಾಲೇಜಿನಲ್ಲಿ ಸಾಹಿತ್ಯ ಸಂಭ್ರಮ, ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾರಂಭವನ್ನು ಕಲಾ ಶ್ರೀ ಡಾ. ಲಕ್ಷ್ಮಣದಾಸ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೃಪತುಂಗ
ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ವಿ. ಶಿವಾನಂದ್, ತಾಲೂಕು ಕಸಾಪ ಅಧ್ಯಕ್ಷ ಕೆಂ.ಬ. ರೇಣುಕಯ್ಯ, ಡಾ. ಬಿ. ನಂಜುಂಡಸ್ವಾಮಿ, ಕಸಂ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋ.ಮು. ಭಾಸ್ಕರಾಚಾರ್ ವಹಿಸಲಿದ್ದಾರೆ.

ಜಲಧಿಗೆರೆ ಅಮ್ಮನವರ ಜಾತ್ರೆ
ಕುಣಿಗಲ್ ತಾಲೂಕಿನ ಎಡೆಯೂರು ಹೋಬಳಿಯ ಜಲಧಿಗೆರೆಯ ಜಲಧಿಗೆರೆ ಅಮ್ಮನವರ ಜಾತ್ರಾಮಹೋತ್ಸವವನ್ನು ಮಾ.14 ಮತ್ತು 15 ರಂದು ಹಮ್ಮಿಕೊಳ್ಳಲಾಗಿದೆ. 14ರಂದು ರಾತ್ರಿ 11 ಗಂಟೆಗೆ ಅಮ್ಮವರ ಮುತ್ತಿನ ಪಲ್ಲಕ್ಕಿ ಉತ್ಸವ ಮತ್ತು ಆಕರ್ಷಕ ಬಾಣ ಬಿರುಸಿನ ಪ್ರದರ್ಶನ ಏರ್ಪಡಿಸಿದ್ದು, 15ರಂದು ಬೆಳಗ್ಗೆ 5.30ಕ್ಕೆ ಅಗ್ನಿಕೊಂಡ ಉತ್ಸವ, ಸಂಜೆ ನಾಲ್ಕುವರೆ ಗಂಟೆಗೆ ಶ್ರೀ ಅಮ್ಮನವರ ವೈಭವದ ರಥೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

 ಅಭಿನಂದನೆ
ತಿಪಟೂರು:
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ತಂಡವು ಹಾಸನದ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಮಾಧ್ಯಮ ಹಬ್ಬ ಸ್ಪರ್ಧಾವಳಿಯಲ್ಲಿ ರೇಡಿಯೋ ಜಾಕಿ ಮತ್ತು ನಕಲಿ ಜಾಹೀರಾತು ಭಾಗದಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದೆ.
 ವಿಜೇತ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಡಾ.ಜಯದೇವಪ್ಪ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ವಿನಾಯಕ, ಉಪನ್ಯಾಸಕ ಪ್ರೊ. ರಾಮಚಂದ್ರ, ಪ್ರೊ.ಈರಯ್ಯ, ಡಾ.ಹೊನ್ನಾಂಜನೇಯ, ದೈಹಿಕ ಶಿಕ್ಷಣ ನಿರ್ದೇಶಕ ಮನೋಜ್‌ಕುಮಾರ್ ಮತ್ತಿತರರು ಅಭಿನಂದೆ ಸಲ್ಲಿಸಿದ್ದಾರೆ.

ಇಂದು ದಾಸೋಹ ನಿಲಯ ಉದ್ಘಾಟನೆ
ಗುಬ್ಬಿ:
ತಾಲೂಕಿನ ನಿಟ್ಟೂರು ಪುರ ಗ್ರಾಮದ ಶ್ರೀಕಲ್ಲೇಶ್ವರಸ್ವಾಮಿ ದೇವಾಲಯದ ನೂತನ ದಾಸೋಹ ನಿಲಯದ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವವು ಮಾ.14 ರಂದು ನಡೆಯಲಿದೆ. ಸಾನಿಧ್ಯವನ್ನು ಶ್ರೀಕ್ಷೇತ್ರ ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮೀಜಿ, ಬೆಟ್ಟದಹಳ್ಳಿ ಗವಿ ಮಠದ ಶ್ರೀಚಂದ್ರಶೇಖರ ಮಹಾಸ್ವಾಮೀಜಿ ವಹಿಸಲಿದ್ದಾರೆ. ತಹಸಿಲ್ದಾರ್ ಸಿದ್ದಪ್ಪ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅಥಿತಿಗಳಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ, ವೃತ್ತ ಆರಕ್ಷಕ ನಿರೀಕ್ಷಕ ಎಲ್. ಕುಮಾರಪ್ಪ, ಕಾರ್ಯಪಾಲಕ ಎಂಜಿನಿಯರ್ ರಮೇಶ್, ತಿಮ್ಮೇಗೌಡ, ಕರಿಯಪ್ಪ, ಪಿಎಸ್‌ಐ ಮಂಜುನಾಥ್, ಉಪತಹಸಿಲ್ದಾರ್ ನರಸಿಂಹಮೂರ್ತಿ ಮುಂತಾದವರು ಭಾಗವಹಿಸಲಿದ್ದಾರೆ.

ಸಮಗ್ರ ಗುಣಮಟ್ಟ ಕಾರ್ಯಾಗಾರ
ತುಮಕೂರು:
ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಗ್ರ ಗುಣಮಟ್ಟ ನಿರ್ವಹಣಾ ಕಾರ್ಯಾಗಾರ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಮಾ. 15 ರಂದು ಏರ್ಪಡಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಅಧ್ಯಾಪಕರುಗಳಿಗೆ ಅನ್ಯಕಾರ್ಯ ನಿಮಿತ್ತ ರಜೆಯನ್ನು ಕಾಲೇಜು ಶಿಕ್ಷಣ ಇಲಾಖೆಯಿಂದ ಮಂಜೂರು ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement