ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಚನ ಗಾಯನ-ಸಾಂಸ್ಕೃತಿಕ ಕಾರ್ಯಕ್ರಮ

Srinivasa Murthy VN
Updated On : 19 May 2014, 11:44 am

ತುಮಕೂರು: ವಚನಗಳು ನಮ್ಮ ನಾಡಿನಲ್ಲಿ ತಮ್ಮದೇ ಆದ ಸಾಂಸ್ಕೃತಿಕ-ಸಾಹಿತ್ಯ ಇತಿಹಾಸ ಹೊಂದಿದೆ ಎಂದು ಲೇಖಕಿ ಎಂ.ಸಿ. ಲಲಿತಾ ಅಭಿಪ್ರಾಯಪಟ್ಟರು.
ಇಲ್ಲಿನ ಬಿಲ್ವದಳ ಮಹಿಳಾ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಾಸಿಕ ಕಾರ್ಯಕ್ರಮದ ಅಂಗವಾಗಿ ವಚನ ಗಾಯನ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. 12 ನೇ ಶತಮಾನ ಏನೆಲ್ಲಾ ಬುನಾದಿ ಹಾಕಿಕೊಟ್ಟಿತು ಎಂಬುದು ನಾಡಿಗೆ ಗೊತ್ತಿದೆ. ವಚನಗಳ ಮೂಲಕ ಉತ್ತಮ ಸಂಸ್ಕೃತಿಯನ್ನು ಬದುಕು-ಬಾಳ್ವೆಯನ್ನು ಕಲಿಸಿಕೊಟ್ಟ, ತನ್ನಂತೆಯೇ ಇತರರನ್ನೂ ಗೌರವಿಸಬೇಕು ಎನ್ನುವ ಮಾನವೀಯ ಮೌಲ್ಯಗಳನ್ನು ವಚನಗಳಲ್ಲಿ ಕಾಣಬಹುದಾಗಿದೆ ಎಂದರು. ಜಾತಿಯ ಭಾವನೆಯನ್ನು ವಿರೋಧಿಸುವ, ಮೇಲು-ಕೀಳು ಭೇದ ಭಾವವನ್ನು ತೊಡೆದು ಹಾಕುವ, ಮಹಿಳೆಯರಿಗೆ ಸಮಾನತೆಯ ಅವಕಾಶವನ್ನು ಕಲ್ಪಿಸುವ ಹಲವು ಅಂಶಗಳು ವಚನಗಳಲ್ಲಿ ಕಂಡುಬರುತ್ತವೆ. ಈ ವಚನಗಳನ್ನು ಸರ್ವಕಾಲಿಕವಾಗಿ ಪಾಲಿಸಿದ್ದೇ ಆದರೆ ಸಮಾಜದಲ್ಲಿ ಭ್ರಷ್ಟಾಚಾರ ಮತ್ತೊಂದು ವಿಷಯಗಳು ತಲೆ ಹಾಕಲು ಸಾಧ್ಯವಿಲ್ಲ. ಎಲ್ಲರೂ ಮಾನವತಾವಾದಿಗಳಾಗಿ ಬದುಕಲು ಸಾಧ್ಯವಿದೆ ಎಂದರು. ಇದೇ ಸಂದರ್ಭದಲ್ಲಿ ವಚನ ಗಾಯನ ನಡೆಯಿತು. ಬಿಲ್ವದಳದ ಪ್ರಮುಖರಾದ ಗಂಗಾಂಬಿಕೆ, ಸುಮನ, ಸೌಭಾಗ್ಯ, ಲಲಿತ ಶಿವಣ್ಣ, ಶಶಿಕಲ, ಸುಧಾ, ರಾಜೇಶ್ವರಿ, ವಿಮಲ, ಭಾಗ್ಯ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement