ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಜೃಂಭಣೆಯ ಏಳುಮಂದಮ್ಮ ಜಲದಿ ಮಹೋತ್ಸವ

Srinivasa Murthy VN
Updated On : 20 May 2014, 11:55 am

ಕ.ಪ್ರ.ವಾರ್ತೆ ಮಧುಗಿರಿ ಮೇ 20
ತಾಲೂಕಿನ ಸೋಂಪುರ ಗ್ರಾಮ ದೇವತೆ ಏಳುಮಂದಮ್ಮ ಜಲದಿ ಮಹೋತ್ಸವ  21 ವರ್ಷಗಳ ನಂತರ ಭಾರಿ ಸಡಗರ ಸಂಭ್ರಮದಿಂದ ನಡೆಯಿತು.
1992ರಲ್ಲಿ ನಡೆದಿದ್ದ ಈ ಜಾತ್ರೆಯಲ್ಲಿ ಹಾಲು ಮತದ 9 ಬುಡಕಟ್ಟಿನ  ಕುಟುಂಬದವರು ಆಚರಿಸಿದ್ದು  ತೋಂಡೋಟಿ, ಚಿಕ್ಕದಾಳವಾಟ, ಕೋಡ್ಲಾಪುರ, ಪುರವರ, ಚಿಕ್ಕಬೆಟ್ಟ, ಗುಟ್ಟೆ, ಬ್ರಹ್ಮದೇವರಹಳ್ಳಿ, ವಡ್ಡೇನಹಳ್ಳಿ ಹಾಗೂ ಸೋಂಪುರ ಗ್ರಾಮದವರು ಒಗ್ಗೂಡಿ ಈ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿದರು. ಬೆಳಗಿನ ಜಾವ 4ಕ್ಕೆ ಜಲದಿ, ಗಂಗಾಪೂಜೆ, 101ಎಡೆ ಇತರೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಸೋಂಪುರ ಗ್ರಾಮದ ಪಟೇಲರು, ಗ್ರಾಮಸ್ಥರು ಮತ್ತು ಮರುವೇಕೆರೆ ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು ಜಾತ್ರೆ ಸಿದ್ಧತೆಗೆ ಹಗಲಿರುಳು ಶ್ರಮಸಿದ್ದರು.
ವಿಧಾಸಭಾ ಉಪಾಧ್ಯಕ್ಷ ಎಚ್.ಎಸ್. ಶಿವಶಂಕರರೆಡ್ಡಿ, ಎಂಎಲ್‌ಸಿ ಡಾ.ಹುಲಿನಾಯ್ಕರ್, ಎಪಿಎಂಸಿ ಅಧ್ಯಕ್ಷ ಬಿ.ವಿ.ನಾಗರಾಜು, ತಾ.ಪಂ.ಅಧ್ಯಕ್ಷೆ ಸುನಂದಸಿದ್ದಪ್ಪ, ನೌಕರರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್,ಪೂಜಾರ್ ಗಿರಿಯಪ್ಪ, ಧರ್ಮಕರ್ತ ದೇವದಾಸ್ ಹಾಗೂ ಸಾವಿರಾರು ಭಕ್ತಾದಿಗಳು ಏಳುಮಂದಮ್ಮ ದೇವಿಯ ಕೃಪೆಗೆ ಪಾತ್ರರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement