ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಜಕಾರಣದಲ್ಲಿ ಅತಿಯಾದ ಜಾತಿ ವ್ಯವಸ್ಥೆ ಪ್ರಭಾವ : ವೈ.ಎಚ್.ಹುಚ್ಚಯ್ಯ ಅಸಮಾಧಾನ

Srinivasa Murthy VN
Updated On : 28 May 2014, 10:38 am

ಪಾವಗಡ: ರಾಜಕಾರಣದಲ್ಲಿ ಜಾತಿ ವ್ಯವಸ್ಥೆ ಪ್ರಭಾವ ಬೀರಿದ್ದು ಈ ಹಿಂದಿನ ಶಾಸಕರ ಅವಧಿಯಲ್ಲಿ ತಾಲೂಕಿನಲ್ಲಿ ಒಂದೇ ಜಾತಿಗೆ ಸುಮಾರು 150 ಕೊಳವೆ ಬಾವಿಗಳನ್ನು ಕೊರೆಸಿ ಇತರರಿಗೆ ಅನ್ಯಾಯ ಮಾಡಿದ್ದಾರೆಂದು ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಅವರು ನಿಡಗಲ್ ಹೋಬಳಿಯ ಕ್ಯಾತಗಾನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬೂ ಜಗಜೀವನರಾಮ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕಾರಣದಲ್ಲಿ ಇಂದು ಜಾತಿ ವ್ಯವಸ್ಥೆ ಹೆಚ್ಚು ಪ್ರಭಾವ ಬೀರಿದ್ದು ಸಂವಿಧಾನದ ಪ್ರಕಾರ ಎಸ್‌ಸಿ, ಎಸ್‌ಟಿ ವರ್ಗಗಳಿಗೆ ದೊರೆಯಬೇಕಾದ ಸೌಲಭ್ಯಗಳು ಸಮರ್ಪಕವಾಗಿ ಹಂಚಿಕೆ ಆಗದೆ ಬಹುಪಾಲು ಒಂದೇ ಜಾತಿಗೆ
ಸೀಮಿತವಾಗುವುದರಿಂದ ಅರ್ಹ ದಲಿತರಿಗೆ ವಂಚನೆ ಆಗುತ್ತಿದೆ ಎಂದು ಪ್ರತಿಪಾದಿಸಿದರು.
ದಬ್ಬಾಳಿಕೆ ನಿಂತಿಲ್ಲ: ಭೂ ಮಾಲೀಕರು ಮತ್ತು ಬಂಡವಾಳ ಶಾಹಿಗಳಿಂದ ದಲಿತರ ಮೇಲೆ ನಡೆಯುವ ದಬ್ಬಾಳಿಕೆ ನಿಂತಿಲ್ಲ. ಸರ್ಕಾರದ ಯೋಜನೆಗಳನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದುವರಿಯಲು ಸಲಹೆ ನೀಡಿ ಗ್ರಾಮಗಳಲ್ಲಿ ಇತರೆ ವರ್ಗಗಳ ವಿಶ್ವಾಸ ಪಡೆದು ಸ್ವಾಭಿಮಾನಿಗಳಾಗಿ ಬದುಕುವಂತೆ ಕರೆ ನೀಡಿದರು.
ಬಡವರ ಹೆಸರಿನಲ್ಲಿ ಜಾಬ್ ಕಾರ್ಡ್‌ಗಳನ್ನು ಪಡೆದು ಖಾತ್ರಿ ಯೋಜನೆ ಪ್ರಯೋಜನ ಮಧ್ಯವರ್ತಿಗಳು ಪಡೆಯುತ್ತಿರುವುದರಿಂದ ಕೂಲಿಕಾರರಿಗೆ ವಂಚನೆ ಆಗುತ್ತಿದ್ದು ಗ್ರಾಪಂಗಳಿಗೆ ಭೇಟಿ ನೀಡಿ ಖಾತ್ರಿ ಯೋಜನೆ ಪ್ರಯೋಜನ ಪಡೆದುಕೊಳ್ಳಿ, ಕೆಟ್ಟ ವ್ಯವಸ್ಥೆ ವಿರುದ್ಧ ಜಾಗೃತರಾಗಿ ಬಡವರ ಪರ ಕೆಲಸ ಮಾಡಿ ಎಂದರು. ರಾಜಕಾರಣಿಗಳು, ಸಾಹಿತಿಗಳು ಬರೀ ಭಾಷಣಗಳಿಗೆ ಸೀಮಿತರಾಗದೇ ಕಾಲೋನಿಗಳಿಗೆ ಭೇಟಿ ನೀಡಿ ಎಲ್ಲಾ ವರ್ಗದ ಬಡವರ ಪರ ಕೆಲಸ ಮಾಡಿ ಆಗ ನಿಮ್ಮ ಜೀವನ ಪಾವನವಾಗುವುದು ಎಂದರು.
ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ ದಲಿತರ ಬಗ್ಗೆ ಕಾಳಜಿಯುಳ್ಳ ಭೂ ಮಾಲೀಕರು ಇಂದು ಸಂಕಷ್ಟದಲ್ಲಿದ್ದು ಬಂಡವಾಳ ಶಾಹಿಗಳ ದಬ್ಬಾಳಿಕೆಯಿಂದ ದಲಿತರು ಸಮಸ್ಯೆ ಎದುರಿಸುತ್ತಿದ್ದಾರೆ.
ಗ್ರಾಮಗಳ ದಲಿತ ಯುವಕರು ಸೌಜನ್ಯವಾಗಿ ವರ್ತಿಸಿ ಪಕ್ಷಪಾತಕ್ಕೆ ಅವಕಾಶ ನೀಡದೇ ಎಲ್ಲಾ ಜಾತಿಯ ಕಡು ಬಡವರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲು ತಿಳಿಸಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎನ್. ತಿಮ್ಮಾರೆಡ್ಡಿ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಆರ್.ಎಂ.ನರಸಿಂಹ, ಜಾನಪದ ಕಲಾವಿದ ಜಯರಾಮ್, ಉಪನ್ಯಾಸಕ ಲಿಂಗಣ್ಣ, ದಲಿತ ಮುಖಂಡ ತಿಪ್ಪೇಸ್ವಾಮಿ, ಶಿಕ್ಷಕ ನರಸಪ್ಪ, ದಲಿತ್‌ಕುಮಾರ್, ಓಬಳಾಪುರ ನೀಲಾ ನಾಗರಾಜ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement