ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಆಫ್ರಿಕಾದಲ್ಲಿ ಗುಂಡಿಗೆ ಬಲಿಯಾದ ಕೃಷ್ಣಯ್ಯ ಅಂತ್ಯಕ್ರಿಯೆ

Rashmi Kasaragodu
Updated On : 1 Apr 2013, 11:34 am

ಕುಂದಾಪುರ: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ (ಸಿಎಆರ್) ದೇಶದಲ್ಲಿ ಮಾ.25ರಂದು ಫ್ರೆಂಚ್ ಸೈನಿಕರ ಗುಂಡಿಗೆ ಬಲಿಯಾದ ಇಲ್ಲಿನ ಬಳ್ಕುಂಜೆ ಗ್ರಾಮದ ಕೃಷ್ಣಯ್ಯ ಮೊಗವೀರ (37) ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನ ಸ್ವಗೃಹಕ್ಕೆ ತಂದು ಅಂತಿಮ ಸಂಸ್ಕಾರ ನಡೆಸಲಾಯಿತು.  ಪಾರ್ಥಿವ ಶರೀರ ತರುವ ಸುದ್ದಿ ತಿಳಿದಿದ್ದ ಅವರ ಕುಟುಂಬಿಕರು, ಬಂಧುಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಮೃತರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.  ಬಳ್ಕುಂಜೆ ಗ್ರಾಮದ ನಾರಾಯಣ ಮೊಗವೀರ-ಬಾಲಮ್ಮ ಮೊಗವೀರ ದಂಪತಿ ಕೊನೆಯ ಮಗನಾದ ಕೃಷ್ಣಯ್ಯ ಕಳೆದ 8 ವರ್ಷಗಳಿಂದ ಸಿಎಆರ್ನ ಔಷಧಿ ಕಂಪನಿಯೊಂದರಲ್ಲಿ ಲೆಕ್ಕಾಧಿಕಾರಿಯಾಗಿದ್ದರು. ಅಲ್ಲಿನ ಸ್ಥಳೀಯ ಬಂಡುಕೋರರ ಮತ್ತು ಸರ್ಕಾರ ನಡುವೆ ಸಂಘರ್ಷ ನಡೆಯುತ್ತಿದ್ದು, ಈ ಸಂಘರ್ಷ ಹತೋಟಿಗೆ ತರಲು ಫ್ರೆಂಚ್ ಸೈನ್ಯವನ್ನು ಕರೆಸಲಾಗಿದೆ.  ಈ ಸಂಘರ್ಷದಲ್ಲಿ ತಮಗೆ ಅಪಾಯವಿದೆ ಎಂದು ಅರಿತ ಕೃಷ್ಣಯ್ಯ ಸ್ವದೇಶಕ್ಕೆ ಆಗಮಿಸಲು ಕಳೆದ ಸೋಮವಾರ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಅವರಿದ್ದ ವಾಹನದಲ್ಲಿ ಬಂಡುಕೋರರಿದ್ದಾರೆ ಎಂದು ತಪ್ಪು ತಿಳಿದ ಫ್ರೆಂಚ್ ಸೈನಿಕರು ಗುಂಡು ಹಾರಿಸಿದ ಪರಿಣಾಮ ಮೊಗವೀರ ಗುಂಡಿಗೆ ಬಲಿಯಾಗಿದ್ದರು.  
ಫ್ರಾನ್ಸ್ ಸರ್ಕಾರ ವಿಷಾದ: ಕೃಷ್ಣಯ್ಯ ಪಾರ್ಥಿವ ಶರೀರ ಮನೆಗೆ ತಲುಪುವುದಕ್ಕೆ ಮೊದಲು ಬೆಳಗ್ಗೆ ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಕಚೇರಿ ಮುಖ್ಯಸ್ಥ ಲೇರಿಕ್ ಲೆವರ್ಟೊ ಹಾಗೂ ಕಚೇರಿಯ ಭಾರತೀಯ ಪ್ರತಿನಿಧಿ ಹೇಮಾಂಗಿಣಿ ರಕ್ಷಿತ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement