ಸ್ವಸಹಾಯ ಸಂಘದ ವಾರ್ಷಿಕೋತ್ಸವ
ಬೇಳೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಶಮಿಬಂಧು ಸ್ವಸಹಾಯ ಸಂಘದ 7ನೇ ವಾರ್ಷಿಕೋತ್ಸವ ಸಮಾರಂಭ ಇಲ್ಲಿನ ಸ್ಫೂರ್ತಿಧಾಮದಲ್ಲಿ ಇತ್ತೀಚೆಗೆ ನಡೆಯಿತು. ಸ್ವಸಹಾಯ ಸಂಘದ ಸದಸ್ಯರು ಧಾಮದ ಮಕ್ಕಳೊಂದಿಗೆ ಬೆರೆತು ಸಿಹಿ ಹಾಗೂ ಐಸ್ಸ್ಕೀಂ ಹಂಚಿ ತಮ್ಮ ಸಂತಸವನ್ನು ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ಸ್ವಸಹಾಯ ಸಂಘದ ಅಧ್ಯಕ್ಷ ಚಂದ್ರಶೇಖರ ಆಚಾರ್ ವಹಿಸಿದ್ದರು. ಸ್ಫೂರ್ತಿಧಾಮದ ಮುಖ್ಯ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರ, ಸಂಘದ ಸದಸ್ಯ ಮಾಧವ ಶೆಣೈ ಇದ್ದರು.