21ರಂದು ಬ್ರಾಹ್ಮಣ ಸಮ್ಮೇಳನ
ಮಂಗಳೂರು: ಯುವ ಜನರನ್ನು ಬ್ರಾಹಣ್ಯದ ನೈಜ ಚಿಂತನೆ ಜಾಗೃತಿಗಾಗಿ ಪ್ರೇರೆಪಿಸುವ ನಿಟ್ಟಿನಲ್ಲಿ ಬ್ರಾಹ್ಮಣ ಒಕ್ಕೂಟದ ವತಿಯಿಂದ ಏ. 21ರಂದು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಮಣ್ಣಗುಡ್ಡೆ ಸಂಘನಿಕೇತನದಲ್ಲಿ 'ಬೃಹತ್ ಬ್ರಾಹ್ಮಣ ಸಮ್ಮೇಳನ' ನಡೆಯಲಿದೆ. ಸಮ್ಮೇಳನದಲ್ಲಿ ದ.ಕ., ಉಡುಪಿ, ಕಾಸರಗೋಡು, ಬೆಂಗಳೂರು, ಮದ್ರಾಸ್, ಮುಂಬೈಯಿಂದ ಪ್ರತಿನಿಧಿಗಳು ಪಾಲ್ಗೊಳ್ಳುವರು. ಶಿವಳ್ಳಿ, ಕೋಟ, ಹವ್ಯಕ, ಸ್ಥಾನಿಕ, ಕೋಟೇಶ್ವರ, ಚಿತ್ಪಾವನ, ಕರಾಡ, ದೇಶಸ್ತ ಮುಂತಾದ ಎಲ್ಲಾ ಬ್ರಾಹ್ಮಣರು ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ- 9845083736.