ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

'ಚೆಲ್ಲಾಪಿಲ್ಲಿ' ಕನ್ನಡ ಚಲನಚಿತ್ರ ಧ್ವನಿಸುರುಳಿ ಬಿಡುಗಡೆ

Vishwanath S
Updated On : 6 Apr 2013, 12:28 pm

ಮಂಗಳೂರು: ಶೈನ್‌ಸಿಟಿ ಪ್ರೊಡೆಕ್ಷನ್ ನಿರ್ಮಾಣದ ಸಾಯಿಕೃಷ್ಣ ಕುಡ್ಲ ಚಿತ್ರಕಥೆ, ನಿರ್ದೇಶನದ 'ಚೆಲ್ಲಾಪಿಲ್ಲಿ' ಕನ್ನಡ ಚಲನಚಿತ್ರದ ಹಾಡುಗಳ ಧ್ವನಿಸುರುಳಿ ಶುಕ್ರವಾರ ಸಿಟಿಸೆಂಟರ್‌ನ ಸಿನಿಪೊಲಿಸ್‌ನಲ್ಲಿ ಬಿಡುಗಡೆಗೊಂಡಿತು.
ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಕೇರಳದ ಮಿಕ್ಕು ಕಾವಿಲ್ ಎಂಬವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹೊಸ ಸಂಗೀತ ಗಾಯಕರಾದ ಜೆಸ್ಸಿಗಿಫ್ಟ್, ಕಾರ್ತಿಕ್, ಮಾಲತಿ, ನಕುಲ್ ಅಭ್ಯಂಕರ್ ಮತ್ತು ಶಮಿತಾ ಮಲ್ನಾಡ್, ಅನುರಾಧ ಭಟ್ ಧ್ವನಿ ನೀಡಿದ್ದಾರೆ.
ಮೇ ತಿಂಗಳಿನಲ್ಲಿ ಚಿತ್ರ ಬಿಡುಗಡೆಗೊಳ್ಳಲಿದ್ದು, ನಾಯಕನಾಗಿ ವಿಜಯರಾಘವೇಂದ್ರ, ನಾಯಕಿಯಾಗಿ ಐಶ್ವರ್ಯ ನಾಗ್ ಅಭಿನಯಿಸಿದ್ದಾರೆ. ಕಲಾವಿದರಾಗಿ ಎಂ.ಎಸ್. ಉಮೇಶ್, ಶೋಭರಾಜ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಶಿವಮಂಜು, ಸಂತೋಷ್ ಶೆಟ್ಟಿ, ತಿಮ್ಮಪ್ಪ ಕುಲಾಲ್, ಸತೀಶ್ ಬಂದಲೆ ಇನ್ನಿತರರು ಅಭಿನಯಿಸಿದ್ದಾರೆ.  ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ತುಳು ರಂಗಭೂಮಿಯ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಒಟ್ಟಾಗಿ ಅಭಿನಯಿಸಿದ್ದು ಹೆಮ್ಮೆಯ ವಿಷಯ. ಸಾಯಿಕೃಷ್ಣ ತುಳುನಾಡಿನ ದ್ವಾರಕೀಶ್ ಆಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ವಿಜಯಕುಮಾರ್ ಕೋಡಿಯಾಲ್‌ಬೈಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೊಸತನದ ದೃಷ್ಟಿಕೋನದ ಚಿತ್ರಗಳನ್ನು ಜನ ಒಪ್ಪಿಕೊಳ್ಳುತ್ತಿದ್ದಾರೆ. ಇದಕ್ಕೆ 'ಸಿಂಪಲ್ಲಾಗಿ ಲವ್‌ಸ್ಟೋರಿ' ಎಂಬ ಚಿತ್ರ ಜನಮನ ಗೆದ್ದಿರುವುದು ಉದಾಹರಣೆಯಾಗಿದೆ ಎಂದರು. ನಿರ್ಮಾಪಕರಾಗಿ ಸುದೇಶ್ ಭಂಡಾರಿ, ಸಹನಿರ್ಮಾಪಕರಾಗಿ ಸುಖೇಶ್ ಭಂಡಾರಿಯಾಗಿರುವ ಚಿತ್ರಕ್ಕೆ ಸಾಯಿಕೃಷ್ಣ ಕುಡ್ಲ ಹಾಗೂ ಶಶಿರಾಜ್ ಕಾವೂರು ಕಥೆಯನ್ನು ಸಿದ್ಧಪಡಿಸಿದ್ದಾರೆ. ಸಾಹಿತ್ಯವನ್ನು ಮಂಜು ಕಾರವಾರ್ ಬರೆದಿದ್ದಾರೆ.
ಛಾಯಾಗ್ರಹಣ ಪಿ.ಎಲ್. ರವಿ, ಸಂಕಲನ ನಾಗೇಂದ್ರ ಅರಸ್, ನೃತ್ಯ ನಿರ್ದೇಶಕರಾಗಿ ಸದಾರಾಘವ್, ರಾಜೇಶ್ ಬ್ರಹ್ಮಾವರ್, ಕಲೈ ಮಾಸ್ಟರ್ ಕಾರ್ಯನಿರ್ವಹಿಸಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್, ನವೀನ್ ಡಿ ಪಡೀಲ್, ಸಿನಿಪೊಲಿಸ್ ಮ್ಯಾನೇಜರ್ ಕೀರ್ತನ್ ಶೆಟ್ಟಿ, ಅರವಿಂದ ಬೋಳಾರ್, ಸಂತೋಶ್ ಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement