ಅಸೋಡು ಶಾಲೆಗೆ ಕಂಪ್ಯೂಟರ್ ಕೊಡುಗೆ
ಕುಂದಾಪುರ: ದಿ. ಕಮಲಾಕ್ಷಿ ವಿಠಲ ಶೆಟ್ಟಿ ಸ್ಮರಣಾರ್ಥ ಎಚ್.ಜಿ. ಭಾಸ್ಕರ್ ಶೆಟ್ಟಿ, ಶೈಲಜಾ.ಬಿ. ಶೆಟ್ಟಿ ಹಾಗೂ ಅವರ ಮಕ್ಕಳಾದ ವಿಲಾಸ್ ಶೆಟ್ಟಿ ಮತ್ತು ಡಾ. ರಾಧಿಕಾ ಶೆಟ್ಟಿ ಅವರು ಅಸೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ಹೂವಿನಕೆರೆ ರಾಮಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾ ಇಲಾಖಾ ಪ್ರತಿನಿಧಿಯಾಗಿ ಕೋಟೇಶ್ವರ ಸಿಆರ್ಪಿ ಜಯಕರ್ ಹೆಗ್ಡೆ, ಉದ್ಯಮಿಗಳಾದ ರವಿರಾಜ್ ಹೆಗ್ಡೆ ಅಸೋಡು, ಚಂದ್ರ ಪೂಜಾರಿ, ಕಾಳಾವರ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಭೋಜು ಪೂಜಾರಿ, ಎಸ್ಡಿಎಂಸಿ ಉಪಾಧ್ಯಕ್ಷೆ ಶೋಭಾ ಆಚಾರ್ ಇದ್ದರು.
ಗ್ರಾ.ಪಂ. ಸದಸ್ಯ ಚಂದ್ರಶೇಖರ ಶೆಟ್ಟಿಗಾರ್, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ದಯಾನಂದ ಹೆಗ್ಡೆ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕ ವರ್ಗದವರು ಹಾಜರಿದ್ದರು. ಇದೇ ಸಂದರ್ಭ ಕೊಡುಗೆ ನೀಡಿದ ದಾನಿಗಳನ್ನು ಶಾಲೆ ಹಾಗೂ ಊರವರ ಪರವಾಗಿ ಗೌರವಿಸಲಾಯಿತು.
ಶಿಕ್ಷಕ ಚಂದ್ರ ಶೇಖರ್ ಶೆಟ್ಟಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಹಶಿಕ್ಷಕ ಶ್ರೀಧರ್ ಶೆಟ್ಟಿ ವಂದಿಸಿದರು.