ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಲಾ ಸಾಹಿತ್ಯ ವೇದಿಕೆಯಿಂದ ಭಾಗವತ ನಾರಾಯಣ ಶಬರಾಯ, ಡಾ. ಉಪ್ಪಂಗಳ ರಾಮ ಭಟ್‌ಗೆ ಪ್ರಶಸ್ತಿ

Vishwanath S
Updated On : 7 Apr 2013, 11:50 am

ಉಡುಪಿ: ಇಲ್ಲಿನ ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆ ಘಟಕವು ಪ್ರತೀ ವರ್ಷ ನೀಡುವ ಮಂಗಳ ಕಲಾರತ್ನ ಪ್ರಶಸ್ತಿಗೆ ಹೆಸರಾಂತ ಭಾಗವತ ನಾರಾಯಣ ಶಬರಾಯ ಜಿ. ಎ. ಮತ್ತು ಮಂಗಳ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ, ಎಂ.ಜಿ.ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ. ಉಪ್ಪಂಗಳ ರಾಮ ಭಟ್ಟರನ್ನು ಆಯ್ಕೆ ಮಾಡಲಾಗಿದೆ.
ವೇದಿಕೆಯ ದಶಮಾನೋತ್ಸವ ಸಮಾರಂಭವು ಎ.13 ಮತ್ತು 14ರಂದು ಪರ್ಕಳದ ವಿಘ್ನೇಶ್ವರ ಸಭಾ ಭವನದಲ್ಲಿ ನಡೆಯಲಿದ್ದು, ಈ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೊ. ಉದ್ಯಾವರ ಮಾಧವ ಆಚಾರ್ಯ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ ಎಂದು ವೇದಿಕೆಯ ಅದ್ಯಕ್ಷ ಆತ್ರಾಡಿ ಪ್ರಥ್ವಿರಾಜ್ ಹೆಗ್ಡೆ ಪತ್ರಿಕಾ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement