ಕಾಂಗ್ರೆಸ್ ತೊರೆದಿಲ್ಲ; ಗ್ರಾ.ಪಂ. ಸದಸ್ಯ ಸ್ಪಷ್ಟನೆ
ಹೆಬ್ರಿ: ನಾನು ಕಾಂಗ್ರೆಸ್ನಲ್ಲೇ ಇದ್ದೇನೆ, ಗೋಪಾಲ ಭಂಡಾರಿ ಗೆಲವಿಗೆ ದುಡಿಯುತ್ತೇನೆ ಎಂದು ನಾಡ್ಪಾಲಿನ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಮೇಗದ್ದೆ ಸತೀಶ್ ಶೆಟ್ಟಿ ಮತ್ತು ಪಕ್ಷದ ಕಾರ್ಯಕರ್ತ ಕೂಡ್ಲು ಸುರೇಶ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಹುಟ್ಟು ಕಾಂಗ್ರೆಸಿಗ. ತನ್ನನ್ನು ಬಲವಂತವಾಗಿ ಬಿಜೆಪಿಗೆ ಸೇರಿಸಿ ಅಪಪ್ರಚಾರ ಮಾಡಿದ್ದಾರೆ ಇದು, ಬಿಜೆಪಿಯವರು ನನಗೆ ಮಾಡಿರುವ ಅನ್ಯಾಯ ಎಂದು ದೂರಿದರು.
ಹೆಬ್ರಿಯ ನಾಡ್ಪಾಲು ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ಶೆಟ್ಟಿ ಗುರುವಾರ ಕಾರ್ಕಳದಲ್ಲಿ ಬಿಜೆಪಿ ಸೇರಿದ್ದು ಶುಕ್ರವಾರ ಹೆಬ್ರಿಯ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರೊಂದಿಗೆ ಗುರುತಿಸಿಕೊಂಡರು.