ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಾಬೆಟ್ಟು: ಗದ್ದೆಗಳಿಗೆ ಡ್ರೈನೇಜ್ ನೀರು- ಪರಿಸರದಲ್ಲಿ ದುರ್ನಾತ

Vishwanath S
Updated On : 7 Apr 2013, 11:50 am

ಕಾರ್ಕಳ: ಇಲ್ಲಿನ ಕಾಬೆಟ್ಟು ಎಂಬಲ್ಲಿ ಗದ್ದೆಗೆ ಆಳವಡಿಸಲಾದ ಡ್ರೈನೇಜ್ ಪೈಪ್ ನೀರು ಪರಿಸರದಲ್ಲಿ ಹರಡಿ ರೋಗರುಜಿನಗಳಿಗೆ ಅಹ್ವಾನ ನೀಡುತ್ತಿದೆ.
ಮೂರು ಗದ್ದೆಗಳಿಗೆ ಆಳವಡಿಸಲಾದ ಡ್ರೈನೇಜ್ ಪೈಪ್‌ನಲ್ಲಿ ನೀರು ಇಡೀ ಗದ್ದೆಗಳಲ್ಲಿ ಹರಡಿ ದುರ್ನಾತ ಬೀರುತ್ತಿದೆ. ಮುಖ್ಯವಾಗಿ ಪರಿಸರದಲ್ಲಿ ಹಲವು ಮನೆಗಳಿದ್ದು, ಪರಿಸರದ ಮನೆಗಳ ಬಾವಿ ಕಲುಷಿತಗೊಂಡು ನೀರು ಕುಡಿಯಲು ಆಯೋಗ್ಯವಾಗಿದೆ. ಈ ತ್ಯಾಜ್ಯ ಶೇಖರಣೆಯಿಂದ ಜಾನುವಾರುಗಳು ಹೂತು ಹೋಗುವಷ್ಟು ಇದರಲ್ಲಿ ಹೂಳು ತುಂಬಿ ಹೋಗಿದ್ದು, ಮೇಯುವ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ.
ಇದ್ದಲ್ಲದೇ ಈ ಪರಿಸರದ ಕೆರೆ- ತೋಡಿನ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಈ ನೀರಿನಲ್ಲಿ ಕಾಲಿಟ್ಟರೆ ಗುಳ್ಳೆಕಾರದ ಕಜ್ಜಿ ತಗುಲುತ್ತಿದೆ ಎಂಬುದಾಗಿ ಇಲ್ಲಿನ ಕೃಷಿಕರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement