ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನಿವೃತ್ತ ಆರೋಗ್ಯ ಸಹಾಯಕಿಗೆ ಶುಭವಿದಾಯ

Vishwanath S
Updated On : 7 Apr 2013, 11:51 am

ಉಡುಪಿ: ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಸೆವರಿನ್ ಡಿಸೋಜ ವಯೋನಿವೃತ್ತಿ ಹೊಂದಿದ್ದು, ವಿದಾಯ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ಅವರು ಡಿಸೋಜ ಅವರನ್ನು ಸನ್ಮಾನಿಸಿದರು. ಬೈಲೂರು ಆರೋಗ್ಯ ಕೇಂದ್ರದ ಡಾ. ಸಂತೋಷ್ ಕುಮಾರ್  ಬೈಲೂರು ಹಾಗೂ ಕಾಪು ಆರೋಗ್ಯ ಕೇಂದ್ರದ ಡಾ. ನೌರಿನ್, ಹಿರಿಯ ವೈದ್ಯೇತರ ಮೇಲ್ವಿಚಾರಕ ಕೇಶವ ರಾವ್, ತಾಲೂಕು ಹಿ.ಆ. ಸಹಾಯಕಿ ಸುಶೀಲಾ ಹಾಗೂ ನಿವೃತ್ತ ಆರೋಗ್ಯ ಸಹಾಯಕಿ ಪೌಲಿನ್ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆ. ಸಹಾಯಕ ಗುರುಪ್ರಸಾದ್ ಸ್ವಾಗತಿಸಿದರು. ಕಿ.ಆ. ಸಹಾಯಕ ನಾಗಯ್ಯ ಹಿರೇಮಠ ನಿರೂಪಿಸಿದರು. ಆಂಜನೇಯ ಎಚ್. ವಂದಿಸಿದರು.

ಐರೋಡಿ ದೇವಸ್ಥಾನ ವಾರ್ಷಿಕೋತ್ಸವ
ಐರೋಡಿ:
ಐರೋಡಿಯ ಅಲ್ಸೆಬೆಟ್ಟಿನಲ್ಲಿರುವ ಶ್ರೀ ಮಹಾಕಾಳೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ ಏ.5ರಿಂದ ಪ್ರಾರಂಭವಾಗಿದ್ದು 7ರವರೆಗೆ ನಡೆಯಲಿದೆ.  7ರಂದು ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಅಧ್ಯಕ್ಷತೆ  ವಹಿಸಲಿರುವರು. ನಿವೃತ್ತ ಪೋಲಿಸ್ ಅಧಿಕಾರಿ ಐರೋಡಿ ರಾಮ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತ ದಿ.ಅ.ಗ. ಅಲ್ಸೆಯವರ ಸಂಸ್ಮರಣೆಯೊಂದಿಗೆ ಬ್ರಹ್ಮಾವರದ ಹಿರಿಯ ಛಾಯಾಗ್ರಾಹಕರಾದ ನಾಗರಾಜ ವಾರಂಬಳ್ಳಿ ಹಾಗೂ ದೇವಸ್ಥಾನದ ಪಾತ್ರಿಗಳಾದ ಕರಿಯ ಮಡಿವಾಳರನ್ನು ಸನ್ಮಾನಿಸಲಾಗುವುದು.  ಸಭಾ ಕಾರ್ಯಕ್ರಮದ ನಂತರ  ಸಿಗಂಧೂರು ಮೇಳದಿಂದ ಯಕ್ಷಗಾನ ಬಯಲಾಟ ಪ್ರದರ್ಶನವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement