ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

'ನೀನಿಲ್ಲದೇ ನನಗೇನಿದೆ' ಪುಸ್ತಕ ಲೋಕಾರ್ಪಣೆ

Vishwanath S
Updated On : 7 Apr 2013, 11:50 am

ಉಡುಪಿ: ಒಂದು ಸೂರಿನಡಿಯಲ್ಲಿ ಪತಿ ಪತ್ನಿಯರಿಬ್ಬರು ಸಣ್ಣಪುಟ್ಟ ವಿಷಯಗಳಿಗೆ ಆಡುವ ಜಗಳ ಚಿಕ್ಕ ಮಕ್ಕಳ ಮೇಲೆ ಪ್ರಭಾವ ಬೀರಿ ಮುಂದೆ ಅವರ ಜೀವನಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಹೆತ್ತವರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಮಾತ್ರವಲ್ಲದೇ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ ಹೇಳಿದರು.
ಅವರು ಶನಿವಾರ ಎಂ.ಜಿ.ಎಂ. ಕಾಲೇಜಿನಲ್ಲಿ ಬೆಂಗಳೂರಿನ ಸಾವಣ್ಣ ಪ್ರಕಾಶನ ಹೊರತಂದಿರುವ ಉಡುಪಿಯ ಮನೋವೈದ್ಯ ಡಾ. ವಿರೂಪಾಕ್ಷ ದೇವರುಮನೆ ಅವರು ಬರೆದ 'ನೀನಿಲ್ಲದೇ ನನಗೇನಿದೆ' ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಹೆತ್ತವರು ಮಕ್ಕಳ ಮುಂದೆ ತಮ್ಮ ಕೋಪ ತಾಪವನ್ನು ತೋರಿಸದಿದ್ದರೆ ಮುಂದಿನ ಜನಾಂಗದಲ್ಲಿ ವಿವಾಹ ವಿಚ್ಚೇದನಗಳು ಕಡಿಮೆ ಆಗಬಹುದು ಎಂದಭಿಪ್ರಾಯಪಟ್ಟರು.
ಈ ಸಮಾರಂಭ ಅಧ್ಯಕ್ಷತೆಯನ್ನು ವಹಿಸಿದ ಡಾ.ಎ.ವಿ. ಬಾಳಿಗ ಸಮೂಹ ಸಂಸ್ಥೆಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಮಾತನಾಡಿ, ಮದುವೆ ನಂತರದಲ್ಲಿ ಆಗುತ್ತಿದ್ದ ವಿಚ್ಚೇದನಗಳು ಮುಂದೆ ನಿಶ್ಚಿತಾರ್ಥದ ನಂತರದ ಆದರೂ ಆಶ್ಚರ್ಯಪಡಬೇಕಾಗಿಲ್ಲ. ಅಷ್ಟರಮಟ್ಟಿಗೆ ಗಂಡು ಹೆಣ್ಣಿನ ನಡುವೆ ಮನಸ್ತಾಪಗಳು ಬೆಳೆಯುತ್ತಿವೆ ಎಂದರು. ಮದುವೆ ಎಂಬುದು ಮಾನಸಿಕ ಕಾಯಿಲೆಗೆ ಚಿಕಿತ್ಸೆ ಅಲ್ಲ. ಗಂಡು ಹೆಣ್ಣು ಅನ್ಯೋನವಾಗಿದ್ದರೆ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ ಎಂದು ತಿಳಿಸಿದರು.
ಡಾ.ಟಿ.ಎಂ.ಎ. ಪೈ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್ ಪುಸ್ತಕ ಪರಿಚಯ ಮಾಡಿದರು.
ಸಾವಣ್ಣ ಪ್ರಕಾಶನದ ಜಮೀಲ್, ಲೇಖಕ ಡಾ. ವಿರೂಪಾಕ್ಷ ದೇವರು ಇದ್ದರು.
ವೀಣಾ ವಿರೂಪಾಕ್ಷ ಮತ್ತು ಪ್ರಭಾ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement