ವಿದ್ಯಾರ್ಥಿ ವೇತನ ವಿತರಣೆ, ವಾರ್ಷಿಕೋತ್ಸವ
ಕುಂದಾಪುರ: ದಿ. ಗಣೇಶ್ ಮೊಗವೀರ ಬಳ್ಕೂರು ಸ್ಮರಣಾರ್ಥ ಬಳ್ಕೂರು ಕಲಾ ಕ್ಯಾಂಪ್ ಫ್ರೆಂಡ್ಸ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ಬೆನಕನ ಕಟ್ಟೆ ಕುದ್ರುನಲ್ಲಿ ನಡೆಯಿತು.
ಸಮಾರಂಭವನ್ನು ರಾಮ್ಸನ್ ಟೈಲ್ಸ್ನ ಅಧ್ಯಕ್ಷ ಡಾ. ಬಾಲಕೃಷ್ಣ ಭಂಡಾರಿ ಉದ್ಘಾಟಿಸಿ, ವಿದ್ಯಾರ್ಥಿ ವೇತನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿ. ಕಲಾ ಕ್ಯಾಂಪ್ ಫ್ರೆಂಡ್ಸ್ನ ಈ ಕಾರ್ಯಕ್ರಮ ನಿರಂತವಾಗಿ ನಡೆಯುತ್ತಿರಲಿ. ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ನ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ದಿ. ಗಣೇಶ ಮೊಗವೀರರ ಆತ್ಮಕ್ಕೆ ಶಾಂತಿ ಸಿಗುವಂತಹ ಕೆಲಸ ಇಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ ಎಂದರು.
ಡಾ. ವೆಂಕಟರಮಣ ಉಡುಪ, ಉದ್ಯಮಿ ಕೆ. ಜಯಕರ ಶೆಟ್ಟಿ, ವೇ.ಮೂ. ಶ್ರೀಧರ ಉಡುಪ, ಕಲಾ ಕ್ಯಾಂಪ್ ಫ್ರೆಂಡ್ಸ್ನ ಗೌರವ ಅಧ್ಯಕ್ಷ ರಾಜು ಮೊಗವೀರ, ಕುದ್ರುಮನೆ ಇದ್ದರು.
ನಾಗೇಶ್ .ಎಸ್, ಉದಯ ಬಳ್ಕೂರು ಕಾರ್ಯಕ್ರಮ ನಿರೂಪಿಸಿದರು. ಕಲಾ ಕ್ಯಾಂಪ್ ಫ್ರೆಂಡ್ಸ್ನ ಅಧ್ಯಕ್ಷ ಸದಾನಂದ ಬಳ್ಕೂರು ಸ್ವಾಗತಿಸಿದರು. ನಾಗೇಶ್ ಶೇರೆಗಾರ್ ವಂದಿಸಿದರು. ಬಳಿಕ ಮನರಂಜನಾ ಕಾರ್ಯಕ್ರಮ ಜರುಗಿತು.