ಎಸ್ಸಿಡಿಸಿಸಿ ಬ್ಯಾಂಕ್ಗೆ ನಬಾರ್ಡ್ ಸಿಜಿಎಂ ಭೇಟಿ
ಮಂಗಳೂರು: ಮುಂಬೈ ನಬಾರ್ಡ್ನ ಮುಖ್ಯ ಪ್ರಬಂಧಕ ನಿರಜ್ ಕುಮಾರ್ ಗುಪ್ತಾ ಸೋಮವಾರ ಎಸ್ಸಿಡಿಸಿಸಿ ಬ್ಯಾಂಕಿಗೆ ಭೇಟಿ ನೀಡಿದರು. ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಸ್ವಾಗತಿಸಿ ಬ್ಯಾಂಕಿನ ಹೊಸ ಕಾರ್ಯ ಯೋಜನೆಗಳ ಕುರಿತು ವಿವರಿಸಿದರು. ಬ್ಯಾಂಕಿನ ಕಾರ್ಯ ಸಾಧನೆ ಬಗ್ಗೆ ಪರಿಶೀಲಿಸಿದ ನೀರಜ್ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಬಾರ್ಡ್ನ ಮುಖ್ಯ ಉದ್ದೇಶ ರೈತರಿಗೆ ಸವಲತ್ತು ನೀಡುವುದಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ನನ್ನು ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು ಎಂದರು. ಎಸ್ಸಿಡಿಸಿಸಿ ಬ್ಯಾಂಕ್ ಕೋರ್ ಬ್ಯಾಂಕಿಂಗ್ನಂತಹ ವ್ಯವಸ್ಥೆಯನ್ನು ಅಳವಡಿಸಿಕೊಂಡು ಆಧುನಿಕತೆಗೊಳ್ಳುತ್ತಿದೆ. ರೈತರಿಗೆ ರುಪೇ ಕಿಸಾನ ಕ್ರೆಡಿಟ್ ಕಾರ್ಡ್ ನೀಡಲು ಮುಂದಾಗಿದೆ. ಇದಕ್ಕೆ ನಬಾರ್ಡನಿಂದ ಸಹಕಾರ ನೀಡುವುದಾಗಿ ಹೇಳಿದರು. ನಬಾರ್ಡ್ ಸಹಾಯಕ ಮಹಾಪ್ರಬಂಧಕ ಪ್ರಸಾದ್ ರಾಜ್, ವ್ಯವಸ್ಥಾಪಕಿ ಸಿ. ಸುಮಿತ್ರ, ಎಸ್ಸಿಡಿಸಿಸಿ ಬ್ಯಾಂಕ್ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ವ್ಯವಸ್ಥಾಪನಾ ನಿರ್ದೇಶಕ ಎಂ. ಗೋಪಾಲಕೃಷ್ಣ ಭಟ್ ಇದ್ದರು.