ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕುರಿಯ ಶಾಸ್ತ್ರಿ ಜನ್ಮಶತಮಾನೋತ್ಸವ ಸರಣಿ ಕಾರ್ಯಕ್ರಮ ಸಮಾರೋಪ

Vishwanath S
Updated On : 9 Apr 2013, 11:27 am

ವಿಟ್ಲ: ಮಹೋನ್ನತ ಕಲಾವಿದ ಕುರಿಯ ವಿಠಲ ಶಾಸ್ತ್ರಿ ಅವರ ಜನ್ಮಶತಮಾನೋತ್ಸವವನ್ನು ಆಚರಿಸಿ, ಪುನೀತರಾಗಬೇಕಾಗಿರುವುದು ನಮ್ಮ ನಿಮ್ಮಂತಹ ಕಲಾಭಿಮಾನಿಗಳ ಕರ್ತವ್ಯವಾಗಿದೆ. ಈ ಊರಿನ ಹೆಸರನ್ನು ದೇಶದಾದ್ಯಂತ ಪಸರಿಸಿದ ಕೀರ್ತಿ ಅವರದ್ದು ಎಂದು ಕುಂಬಳೆ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷರಾದ ಜಯರಾಮ ಮಂಜತ್ತಾಯ ಅಭಿಪ್ರಾಯಪಟ್ಟರು.
ಪೈವಳಿಕೆ ಗ್ರಾಮದ ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲೆಯಲ್ಲಿ ಶನಿವಾರ ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೈವಳಿಕೆ ಗ್ರಾ.ಪಂ.ಅಧ್ಯಕ್ಷ ಮಣಿಕಂಠ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ,  ಕುರಿಯ ವಿಠಲ ಶಾಸ್ತ್ರಿ ಅವರ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಕಲಾಭಿಮಾನಿಗಳು ಕಾರ್ಯಪ್ರವೃತ್ತವಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಬಿ. ಶಂಕರ ರೈ, ಮಂಜೇಶ್ವರ ಬ್ಲಾಕ್ ಪಂ. ಉಪಾಧ್ಯಕ್ಷ ಹರ್ಷದ್ ವರ್ಕಾಡಿ, ಪೈವಳಿಕೆ ಗ್ರಾ.ಪಂ. ಸದಸ್ಯ ಕೆ. ದೇವು ಮೂಲ್ಯ ಮಾತನಾಡಿದರು. ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಕುರಿಯ ವೆಂಕಟ್ರಮಣ ಶಾಸ್ತ್ರಿ ಮತ್ತು ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸತೀಶ್ವರ ಭಟ್ ಉಪಸ್ಥಿತರಿದ್ದರು.
ಕುರಿಯ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಟ್ರಸ್ಟಿ ಪ್ರಮೋದ್ ಕುಮಾರ್ ಭಟ್ ವಂದಿಸಿದರು. ಶಿಕ್ಷಕ ಕಾಂತಿಲ ತಿರುಮಲೇಶ್ವರ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಾಸರಗೋಡು ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ವತಿಯಿಂದ ಯಕ್ಷಗಾನ ಬೊಂಬೆಯಾಟ, ತಲಪಾಡಿ ಯಕ್ಷ ಸಿಂಧೂರ ಮಹಿಳಾ ಯಕ್ಷಗಾನ ಕೂಟದಿಂದ ತಾಳಮದ್ದಳೆ ರಾವಣಾಂತರಂಗ, ಬಡಗು ತಿಟ್ಟಿನ ಕಲಾವಿದರಿಂದ ಬಯಲಾಟ ದಕ್ಷಾಧ್ವರ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement