12ರಂದು 'ಚೌಟರ ಚೌಕಿ' ಬಯಲು ರಂಗ ಮಂದಿರ ಉದ್ಘಾಟನೆ
ಕಾಂತಾವರ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ 2010ರಲ್ಲಿ ಅಸ್ತಿತ್ವಕ್ಕೆ ಬಂದ ಅಲ್ಲಮಪ್ರಭು ಪೀಠದ ವತಿಯಿಂದ 1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಹಾಮನೆ ಎಂಬ ಆಡಳಿ ಕಚೇರಿ ಹಾಗೂ 10 ಲಕ್ಷ ವೆಚ್ಚದಲ್ಲಿ ಚೌಟರ ಚೌಕಿ ಬಯಲು ರಂಗ ಮಂದಿರ ಏ.12ರಂದು ಕಾಂತಾವರದಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮದ ಅಂಗವಾಗಿ ಏ.12ರಿಂದ 14 ವರಗೆ ಮೂರು ದಿನಗಳ ರಂಗಾನುಭಾವದ ಸಮಾರಂಭವೂ ನಡೆಯಲಿದೆ. ಸಂಸದ ಕೆ. ಜಯಪ್ರಕಾಶ ಹೆಗ್ಡೆ ಆಡಳಿತ ಕಚೇರಿ ಹಾಗೂ ರಂಗಮಂದಿರವನ್ನು ಉದ್ಘಾಟಿಸಲಿದ್ದು, ವಿಧಾನಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ.