ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೊಲ್ಲೂರಿನಲ್ಲಿ ರೇವಣ್ಣ ದಂಪತಿ-ಚಂಡಿಕಾ ಯಾಗ

Mainashree
Updated On : 10 Apr 2013, 12:33 pm

ಕುಂದಾಪುರ: ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮಂಗಳವಾರ  ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ನವಗ್ರಹ ಚಂಡಿಕಾ ಯಾಗ ನೆರವೇರಿಸಿದರು. ಪತ್ನಿ ಭವಾನಿ ಜೊತೆಗಿದ್ದರು. ಪ್ರತಿವರ್ಷ ರೇವಣ್ಣ ಕೊಲ್ಲೂರಿಗೆ ಆಗಮಿಸಿ ಚಂಡಿಕಾಯಾಗ ನಡೆಸುತ್ತಾರೆ. ಆದರೆ ಈ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ಕೊಲ್ಲೂರಿಗೆ ಭೇಟಿ ನೀಡಿರುವುದು ವಿಶೇಷ. ಅಲ್ಲದೇ ಈ ಬಾರಿ ಅವರ ಪೂಜೆ, ಭೇಟಿಯ ಫೋಟೋಗಳನ್ನು ತೆಗೆಯುವುದಕ್ಕೆ ಮಾಧ್ಯಮಗಳಿಗೆ ಅವಕಾಶ ನೀಡಲಿಲ್ಲ, ರೇವಣ್ಣ ಮಾಧ್ಯಮದವರೊಂದಿಗೆ ಮಾತನಾಡುವುದಕ್ಕೂ ನಿರಾಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement