ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಆಯುರ್ವೇದ ಅಧ್ಯಯನಾಸಕ್ತರ ಸಂಖ್ಯೆ ಕ್ಷೀಣಿಸುತ್ತಿದೆ: ಡಾ. ಶ್ರೀನಿವಾಸ ಕೆ.

Vishwanath S
Updated On : 11 Apr 2013, 12:57 pm

ಉಡುಪಿ: ಆಯುರ್ವೇದ ವೈದ್ಯಕೀಯ ಸೇವೆಯಲ್ಲಿ ತೊಡಗುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ನವದೆಹಲಿಯ ಸಿ.ಸಿ.ಐ.ಎಂ.ನ ಸದಸ್ಯರಾಗಿರುವ ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶ್ರೀನಿವಾಸ .ಕೆ ಬನ್ನಿಗೋಲ್ ಅಭಿಪ್ರಾಯಪಟ್ಟರು.
 ಅವರು ಮಂಗಳವಾರ ಇಲ್ಲಿನ ಉದ್ಯಾವರ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವಾರ್ಷಿಕೋತ್ಸವ ಸಮಾರಂಭದಲ್ಲಿ, ಸಂಸ್ಥೆಯ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರ ಕೊಡುವ ರಾಜ್ಯ ಮಟ್ಟದ “d«Ú®Ú¥Ú ವೈದ್ಯ ÒÂ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
 ಪ್ರಸ್ತುತ ಆಯುರ್ವೇದ ವೈದ್ಯಕೀಯ ಶಿಕ್ಷಣ ಪಡೆದು ಹೆಚ್ಚಿನವರು ಬೋಧನಾ ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಬೋಧನಾ ವೃತ್ತಿಯಲ್ಲಿ ತೊಡಗಿಸಿಕೊಳ್ಳುವವರು ಆಯುರ್ವೇದ ಮಂಡಳಿಯಲ್ಲಿ ಪೂರ್ಣಾವಧಿ ಸೇವೆಯ ಒಪ್ಪಂದ ಮಾಡಿಕೊಳ್ಳಬೇಕಾಗಿದೆ ಎಂದರು.
ಆಯುರ್ವೇದ ವೈದ್ಯರ ಕೊರತೆಯನ್ನು ನೀಗಿಸುವುದಕ್ಕೆ ಆಯುರ್ವೇದ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿಯತ್ತ ಗಮನ ಮಾಡಬೇಕು. ಅಷ್ಟೇ ಅಲ್ಲ, ಆಯುರ್ವೇದದಲ್ಲಿ ಸಂಶೋಧನೆ, ವಿಶೇಷ ಅಧ್ಯಯನ, ತೀರಾ ಅಪರೂಪದ ಚಿಕಿತ್ಸೆಯನ್ನು ಕೈಗೊಂಡರೆ ತಪ್ಪದೇ ಅದನ್ನು ದಾಖಲಿಸಬೇಕು ಎಂದು ಅವರು ಸಲಹೆ ಮಾಡಿದರು.
 ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಜಾನಪದ ವೈದ್ಯ ವಾಸಪ್ಪ ಬಿ. ಬಡಿಗೇರ ಅವರು ಪ್ರಶಸ್ತಿಯನ್ನು ಸ್ವೀಕರಿಸಿ, ಆಯುರ್ವೇದವನ್ನು ಕಲಿಯುವ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಕೊಳ್ಳುವುದು ಅತ್ಯಗತ್ಯ. ತಾವು ತನ್ನ ಹಿರಿಯರಿಂದ ಪಡೆದ ಈ ವಿದ್ಯೆಯನ್ನು ಕೊನೆಯ ಉಸಿರು ಇರುವವರೆಗೂ ಜನರ ಸೇವೆಗೆ ಬಳಸುತ್ತೇನೆ ಎಂದರು.  
 ಕಾಲೇಜಿನ ಪ್ರಾಂಶುಪಾಲ ಡಾ.ಯು.ಎನ್. ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಶಿವ ರಾವ್ ಭಾಗವಹಿಸಿದ್ದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ.ಬಿ.ಆರ್. ದೊಡ್ಡಮನಿ ಇದ್ದರು.
ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷ ಡಾ. ನಾಗರಾಜ ಜಿ. ಭಟ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ಕೆ.ಆರ್. ರಾಮಚಂದ್ರ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಪರಿಷತ್‌ನ ಉಪಾಧ್ಯಕ್ಷೆ ಚೈತ್ರಾ ಪರಿಷತ್‌ನ ವರದಿ ವಾಚಿಸಿದರು. ಕಾರ್ಯದರ್ಶಿ ಸೈಯದ್ ಆರ್. ತಬೀಷ್ ವಂದಿಸಿ, ಅರ್ಪಿತಾ ವಾರಿಯಾರ್ ಮತ್ತು ಸೀಮಾ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement