ಉಡುಪಿಯಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ
ಉಡುಪಿ: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಇಲ್ಲಿನ ಇಂದಿರಾನಗರ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಹೃದ್ರೋಗ, ನೇತ್ರ, ಎಲುಬು, ಚರ್ಮ, ಕೀಲು ಹಾಗೂ ಸಾಮಾನ್ಯ ಆರೋಗ್ಯ ಉಚಿತ ತಪಾಸಣಾ ಶಿಬಿರವು ಇತ್ತೀಚೆಗೆ ಜರುಗಿತು.
ಶಿಬಿರವನ್ನು ನಾಗರಿಕ ಅರೋಗ್ಯ ವೇದಿಕೆ ಕಾರ್ಯದರ್ಶಿ ಮಧುಸೂದನ ಹೇರೂರು ಉದ್ಘಾಟಿಸಿದರು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಜಾಸ್ಮಿನ್ ರೋಜಾ, ಮಿಷನ್ ಆಸ್ಪತ್ರೆಯ ದೊರಕ ಪ್ರೇಮಲತಾ ಹಾಗೂ ರೋಹಿ ರತ್ನಾಕರ ಇದ್ದರು. ಸುನೀತಾಚಂದ್ರ ನಿರೂಪಿಸಿದರು. ವಾಲ್ಟಸ್ ಸುಕುಮಾರ ಸ್ವಾಗತಿಸಿದರು.
ಡಾ. ನರೇಂದ್ರ ಶೆಣೈ, ಡಾ. ಸುರೇಶ್ ಶೆಣೈ, ಡಾ.ಎ.ಆರ್. ಆಚಾರ್ಯ, ಡಾ. ರತೀಶ್ ಜಾನ್ಸನ್, ಡಾ. ಸನತ್ ಎಸ್.ರಾವ್, ಡಾ. ತೇಜಸ್ವಿ ಕಿರಣ್ ರೋಗಿಗಳನ್ನು ತಪಾಸಣೆ ಮಾಡಿ ಸಲಹೆ ಸೂಚನೆ ನೀಡಿದರು. ಸಿಹಿ ಮೂತ್ರ ರೋಗ ಪರೀಕ್ಷೆಯನ್ನು ಬಯಕಾನ್ ಕಂಪೆನಿಯ ಅಶ್ವಿನ್ ನಡೆಸಿದರು ಮತ್ತು ಅವಶ್ಯಕ ಔಷಧಿಗಳನ್ನು ನೀಡಲಾಯಿತು. ಸಾವಿತ್ರಿ ನಾಯಕ್ ವಂದಿಸಿದರು.