ತರಬೇತಿ ಕಾರ್ಯಾಗಾರ ಉದ್ಘಾಟನೆ
ಬ್ರಹ್ಮಾವರ: ಸರ್ಕಾರವು ಯುವ ಜನರಿಗೆ ವಿವಿಧ ಸ್ವಉದ್ಯೋಗ ಕೈಗೊಳ್ಳಲು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇವುಗಳನ್ನು ಯುವಕರು ಬಳಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ. ನಾಗೇಶ ಹೇಳಿದ್ದಾರೆ. ಇಲ್ಲಿನ ರುಡ್ಸೆಟ್ ಸಂಸ್ಥೆಯಲ್ಲಿ ನಡೆದ ಇಲೆಕ್ಟ್ರಿಕ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‌ಸೆಟ್ ಸರ್ವಿಸ್ ಹಾಗೂ ತ್ರಿಚಕ್ರ ವಾಹನ ಸರ್ವಿಸಿಂಗ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ವಿಜಯಕುಮಾರ ಡಿ. ನೇರ್ಲೆಕರ್ ವಹಿಸಿದ್ದರು. ನಾಡಾದ ಫಾ.ಎಂ. ಡಿಸೋಜಾ, ಐಟಿಐ ಕಾಲೇಜನ ಜಂಟಿ ತರಬೇತಿ ಅಧಿಕಾರಿ ಮೋಹನ್‌ಚಂದ್ರ ವೇದಿಕೆಯಲ್ಲಿದ್ದರು. ಸಂಸ್ಥೆಯ ಉಪನ್ಯಾಸಕ ಕರುಣಾಕರ ಜೈನ್ ಕಾರ್ಯಕ್ರಮದ ಹಿನ್ನೋಟ ನೀಡಿ ಸ್ವಾಗತಿಸಿದರು. ಇನ್ನೊಬ್ಬ ಉಪನ್ಯಾಸಕ ಬಸವರಾಜ್ ನಿರೂಪಿಸಿ, ವಂದಿಸಿದರು.