ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನೀತಿ ಸಂಹಿತೆ, ಪ್ರಕ್ರಿಯೆ ಬಗ್ಗೆ ಚುನಾವಣಾಧಿಕಾರಿ ಮಾಹಿತಿ

Vishwanath S
Updated On : 11 Apr 2013, 12:56 pm

ಕಾರ್ಕಳ: ಮತದಾನದ ವೇಳೆ ಹಾಗೂ ಚುನಾವಣಾ ನೀತಿ ಸಂಹಿತೆ ಸೇರಿದ್ದಂತೆ ಇನ್ನಿತರ ಚುನಾವಣಾ ಪ್ರಕ್ರಿಯೆ ಬಗ್ಗೆ ವಿಶೇಷ ಚುನಾವಣಾಧಿಕಾರಿ ಪ್ರಸನ್ನ ವಿ. ಯವರು ಪತ್ರಿಕೆ ಮಾಹಿತಿ ನೀಡಿದ್ದು, ಮತದಾರರಿಗೆ ರಾಜಕೀಯ ಪಕ್ಷ ಹಣ- ಹೆಂಡ ಇನ್ನಿತರ ಆಮಿಷ ಬೀಳದ್ದಂತೆ ಕಿವಿ ಮಾತು ಹೇಳಿದ್ದಾರೆ.
ಮಂಗಳವಾರ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮತದಾನ ಬೆ. 7ರಿಂದ ಸಂಜೆ 5 ತನಕ ಹಾಗೂ 196 ಮತಗಟ್ಟೆಗಳಲ್ಲಿ 26 ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಲಾಗಿದ್ದು, 14 ಮಂದಿ ಸೆಕ್ಟರ್ ಅಧಿಕಾರಿಗಳು, ಮೂರು ಪ್ಲೆಯಿಂಗ್ ಹಾಗೂ ತಾಲೂಕು ನೀತಿ ಸಂಹಿತೆ ತಂಡ ಬೇಕಲ್ ಅಧ್ಯಕ್ಷತೆಯಲ್ಲಿ ಚುನಾವಣಾ ವೀಕ್ಷಣಾ ಅಧಿಕಾರಿ ತಿಮ್ಮರಾಯಪ್ಪ ಹಾಗೂ ಐಎ.ಎಸ್ ಹಿರಿಯ ಅಧಿಕಾರಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ  ಮತದಾನ ಸುಸೂತ್ರ ನಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ನೀತಿ-ಸಂಹಿತೆ ಜಾರಿ ನಡೆಸುವಾಗ ಮೊದಲು ಸ್ಥಳೀಯ ಸಂಸ್ಥೆಗಳಿಂದ, ಚುನಾವಣಾಧಿಕಾರಿಗಳಿಂದ, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಬೆಳ್ಮಣ್, ಸೋಮೇಶ್ವರದಲ್ಲಿ ಸಾಣೂರು, ಬಜಗೋಳಿಗಳಲ್ಲಿ ನಾಲ್ಕು ಚೆಕ್‌ಪೋಸ್ಟ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಡಿವೈಎಸ್ಪಿ ಜಯಂತ್, ತಹಸೀಲ್ದಾರ್ ನಿರ್ಮಲಾದೇವಿ, ಪ್ರಭಾರ ತಹಸೀಲ್ದಾರ್ ಮಾಣಿಕ್ಯ, ವೃತ್ತನಿರೀಕ್ಷಕ ವೆಲೆಂಟೈನ್ ಡಿಸೋಜಾ ಇನ್ನಿತರರ ಉಪಸ್ಥಿತರಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement