ಬೆಳ್ಮಣ್ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಸಮಾವೇಶ
ಶಿರ್ವ: ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಕಳ ವಲಯ, ಬೆಳ್ಮಣ್ ವೃತ್ತ ವ್ಯಾಪ್ತಿಯ ನಿಟ್ಟೆ, ನಂದಳಿಕೆ, ಮುಂಡ್ಕೂರು ಕ್ಲಸ್ಟರ್ಗಳ ಶಾಲೆಗಳ ಮುಖ್ಯ ಶಿಕ್ಷಕರ ಸಮಾವೇಶ ಇಲ್ಲಿನ ಬೆಳ್ಮಣ್ ಪುನಾರುಕೆರೆ ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ವಸಂತಿ ಬಾಯಿ ಮತ್ತು ಅವರ ಪತಿ ನಿವೃತ್ತ ಮುಖ್ಯೋಪಾಧ್ಯಾಯ ವಿಶ್ವನಾಥ ಪ್ರಭು ಅವರನ್ನು ಶಿಕ್ಷಣ ಸಂಯೋಜಕಿ ಶೈಲಜಾ ಹೆಗ್ಡೆ ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಯಂತಿ ಶೆಟ್ಟಿ, ಸ.ಶಾ. ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀಕಾಂತ ಭಟ್, ಕಾರ್ಕಳ ತಾಲೂಕು ಅ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ವಿ.ಕೆ. ರಾವ್ ನಂದಳಿಕೆ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಕರುಣಾಕರ ಪೂಜಾರಿ ನಿಟ್ಟೆ, ಪಾಂಡುರಂಗ ಶೆಟ್ಟಿ ನಂದಳಿಕೆ, ಚಂದ್ರಕಾಂತ ಡೇಸಾ ಮುಂಡ್ಕೂರು, ಶಿಕ್ಷಕಿ ಸುಲೋಚನಾ ಇನ್ನ, ಕೃಷ್ಣಪ್ಪ ಪರಪ್ಪಾಡಿ, ಡೋರಿಸ್ ಪೆಂಗಾಲ್, ರಘುನಾಥ ನಾಯಕ್ ಪುನಾರು, ಜಯರಾಮ ಪ್ರಭು ಗಂಪದಬೈಲು, ಶ್ರೀಶಾಸ್ತಾವು ಭಜನಾ ಮಂಡಳಿ ಅಧ್ಯಕ್ಷ ಶಂಕರ ಆಚಾರ್ಯ ಮತ್ತಿತರರು ಇದ್ದರು.ಶಿಕ್ಷಕ ದೇವದಾಸ್ ಪಾಟ್ಕರ್ ಪರಿಚಯಿಸಿದರು. ಸತೀಶ ಶೆಟ್ಟಿ ಸ್ವಾಗತಿಸಿದರು. ವೀಣಾ ಕಾಮತ್ ಕಲ್ಯಾ ನಿರೂಪಿಸಿದರು. ಕಸ್ತೂರಿ ಕೈರಬೆಟ್ಟು ವಂದಿಸಿದರು.