ಸುದ್ದಿ ಸಂಕ್ಷೇಪ
ಮೈಸೂರಲ್ಲೂ ನಾರಾಯಣ ಹೃದಯಾಲಯ
ಮೈಸೂರು: ನಾರಾಯಣ ಹೃದಯಾಲಯ ಮಲ್ಟಿ ಸ್ಪೆಷಾಲಿಟಿ ಸರ್ಜಿಕಲ್ ಆಸ್ಪತ್ರೆಯು ನಗರದ ಹೊರ ವರ್ತುಲ ರಸ್ತೆಯಲ್ಲಿ ಕಾರ್ಯಾರಂಭ ಮಾಡುತ್ತಿದೆ. ಸುಮಾರು 200 ಹಾಸಿಗೆ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೊಠಡಿ, ತುರ್ತು ಚಿಕಿತ್ಸಾ ಘಟಕ, ರಕ್ತನಿಧಿ ಕೇಂದ್ರ, ಪ್ರಯೋಗಾಲಯ, ಫಾರ್ಮಸಿ ಸೇರಿದಂತೆ ಅನೇಕ ವ್ಯವಸ್ಥೆಯನ್ನು ಹೊಂದಿದೆ. ಪ್ರಮುಖವಾಗಿ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿ, ನೆಪ್ರೋಲಜಿ, ಯುರೋಲಜಿ, ನ್ಯೂರಾಲಜಿ, ನ್ಯೂರೋ ಸರ್ಜರಿ, ಎಂಡೋಕ್ರಿನಾಲಜಿ, ಆರ್ಥೋಪೆಡಿಕ್ಸ್, ಇಂಟರ್ನಲ್ ಮೆಡಿಸಿನ್, ಪ್ರಸೂತಿ ಮತ್ತು ಗರ್ಭಶಾಸ್ತ್ರ, ಪೇಡಿಯಾಟ್ರಿಕ್ಸ್, ನಿಯಾನೊತಾಲಜಿ ಮತ್ತು ಗ್ಯಾಸ್ಟ್ರೋ ಎಂಟರಾಲಜಿ ವ್ಯವಸ್ಥೆಯೂ ಇದೆ ಎಂದು ಆಸ್ಪತ್ರೆಯ ಸವಲತ್ತು ವಿಭಾಗದ ನಿರ್ದೇಶಕಿ ಅರ್ಚನಾ ಧಿಮಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾಜದ ಎಲ್ಲಾ ಸ್ತರದ ಜನರಿಗೆ ಆರೋಗ್ಯ ಸೇವೆ ನೀಡುವುದು ನಮ್ಮ ಆಸ್ಪತ್ರೆಯ ಮುಖ್ಯ ಉದ್ದೇಶವಾಗಿದೆ. ಅತೀ ಕಡಿಮೆ ವೆಚ್ಚದಲ್ಲಿ ಆಸ್ಪತ್ರೆಯನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಆಸ್ಪತ್ರೆಯು ನೆಲಮಹಡಿ ಮತ್ತು ಮೊದಲ ಮಹಡಿ ಹೊಂದಿದೆ. ಆಸ್ಪತ್ರೆಯ ಪ್ರಮುಖ ಪ್ರದೇಶವಾದ ಶಸ್ತ್ರಚಿಕಿತ್ಸಾ ಕೊಠಡಿ, ತುರ್ತು ಚಿಕಿತ್ಸೆ ವಿಭಾಗ, ರೇಡಿಯಾಲಜಿ ಮತ್ತು ಡಯಾಗ್ನಾಸ್ಟಿಕ್ ಕೊಠಡಿಯನ್ನು ಹವಾನಿಯಂತ್ರಣ ಸೌಲಭ್ಯ ಒದಗಿಸಲಾಗಿದೆ. 10 ಎಕರೆ ಪ್ರದೇಶದಲ್ಲಿ ಈಗ 5.5 ಎಕರೆ ಪ್ರದೇಶವನ್ನು ಮಾತ್ರ ಬಳಸಿಕೊಂಡು ಆಸ್ಪತ್ರೆ ನಿರ್ಮಿಸಲಾಗಿದೆ ಎಂದು ಅವರು ವಿವರಿಸಿದರು. ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಅಶೋಕ್ ಇದ್ದರು.
ಮನಸ್ಸಿನ ಭಾವನೆಗಳು ಮುಖ್ಯ: ಈಶ್ವರಪ್ಪ
ಶಿವಮೊಗ್ಗ: ನನ್ನ ಮನಸ್ಸಿನ ಭಾವನೆಯನ್ನು ಹೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ವಿಪ್ರ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಬುಧವಾರ ಸಂಜೆ ಹವ್ಯಕ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನನ್ನು ಹೇಳಬೇಕೋ ಅದನ್ನೇ ಹೇಳಿದ್ದೇನೆ. ಏನನ್ನು ಹೇಳಬಾರದಿತ್ತೋ ಅದನ್ನು ಹೇಳಿಲ್ಲ. ದಾಖಲೆಗಳು ಮುಖ್ಯವಲ್ಲ, ಮನಸ್ಸಿನ ಭಾವನೆಗಳು ಮುಖ್ಯ ಎಂದಿದ್ದಾರೆ.
ಅತ್ಯಾಚಾರ ಪ್ರಕರಣ:
ನ್ಯಾಯಾಂಗ ಬಂಧನ ವಿಸ್ತರಣೆ
ರಾಂುಬಾಗ: ಇಟ್ನಾಳ ಗ್ರಾಮದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ರಾಂುಬಾಗ ಜೆಎಂಎಫ್ಸಿ ನ್ಯಾಂಾಲಂು ಏ.24ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ.
ಆರೋಪಿಗಳು ಮಾ.1ರಂದು ನ್ಯಾಯಾಲಯದ ಮುಂದೆ ಹಾಜರಾಗಿ ತಾವು ಈ ಪ್ರಕರಣದಲ್ಲಿ ಭಾಗಿಂಾಗಿಲ್ಲ. ರಾಂುಬಾಗ ಪೊಲೀಸರು ತಮ್ಮ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿದ್ದಾರೆಂದು ದೂರಿದ್ದರು. ಈ ಮೊದಲು ನ್ಯಾಂಾಲಂು ಮಾ.28ರವರೆಗೆ ನ್ಯಾಂಾಂಗ ಬಂಧನ ಅವಧಿಯನ್ನು ವಿಸ್ತರಿಸಿತ್ತು. ನಂತರ ಮತ್ತೆ ಏ.10ರವರಗೆ ನ್ಯಾಂಾಂಗ ಬಂಧನ ವಿಸ್ತರಿಸಿತ್ತು. ಬುಧವಾರ ಮತ್ತೆ ಏ.24ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದೆ.