ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪ್ರಮೋದ್ 95 ಕೋಟಿ ಒಡೆಯ

Vishwanath S
Updated On : 16 Apr 2013, 2:03 am

ಉಡುಪಿ: ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಇದುವರೆಗೆ ನಾಮಪತ್ರ ಸಲ್ಲಿಸಿರುವ 13 ಮಂದಿ ಅಭ್ಯರ್ಥಿಗಳ ಪೈಕಿ 4 ಮಂದಿ ಅಭ್ಯರ್ಥಿಗಳು ಕೋಟ್ಯಾಧಿಪತಿಗಳಿದ್ದಾರೆ. ಅವರಲ್ಲಿಯೂ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಉಳಿದವರೆಲ್ಲಗಿಂತಲೂ ಶ್ರೀಮಂತರು.
ಪ್ರಮೋದ್ ಮಧ್ವರಾಜ್ ಸೋಮವಾರ ಸಲ್ಲಿಸಿದ ನಾಮಪತ್ರದ ಜೊತೆಗೆ ಒಟ್ಟು 95,50, 36,864 ಮೌಲ್ಯದ ಆಸ್ತಿ ವಿವರ ತೋರಿಸಿದ್ದಾರೆ.
43,98,91,385 ಸಾಲ ಹೊಂದಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 18,12,20,780 ಆದಾಯ ತೆರಿಗೆ ಪಾವತಿಸಿದ್ದಾರೆ. ಸುಧಾಕರ ಶೆಟ್ಟರು 250 ಗ್ರಾಂ ಅಂದರೆ ಸುಮಾರು 16.56 ಲಕ್ಷ ಮೌಲ್ಯದ ಆಭರಣ ಹೊಂದಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ ರು. 1,16,56,331 ಮತ್ತು ಸಾಲ 5 ಲಕ್ಷ ಮಾತ್ರ.
ಪತ್ನಿ ಬಳಿ 500 ಗ್ರಾಂ ಚಿನ್ನ, ಮಗಳ ಬಳಿ ರು. 46.62 ಲಕ್ಷ ಮೌಲ್ಯದ ಆಸ್ತಿ ಇದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಳಿ ಒಟ್ಟು 1,63,58,925 ಆಸ್ತಿ ಇದೆ. ಸುಮಾರು ರು. 69,68,971 ಸಾಲವನ್ನೂ ಮಾಡಿದ್ದಾರೆ. ಬೆಂಗಳೂರಿನಲ್ಲೊಂದು ಸೈಟು, ಊರಲ್ಲಿ ಸುಮಾರು ರು. 82 ಲಕ್ಷ ಮೌಲ್ಯದ ಪಿತ್ರಾರ್ಜಿತ ಜಮೀನು ಹೊಂದಿದ್ದಾರೆ.
ಕೆ. ಗೋಪಾಲ ಪೂಜಾರಿ ಹೊಟೇಲ್ ಉದ್ಯಮಿ. ಅವರು ಒಟ್ಟು ರು. 12,64,48,181 ಆಸ್ತಿ ಹೊಂದಿದ್ದಾರೆ. ಜೊತೆಗೆ ಸುಮಾರು ರು. 3.13 ಕೋಟಿ ಸಾಲ ಹೊಂದಿದ್ದಾರೆ. ಕಳೆದ ಸಾಲಿನಲ್ಲಿ ಸುಮಾರು 19.60 ಲಕ್ಷ ಆದಾಯ ತೆರಿಗೆ ಪಾವತಿಸಿದ್ದಾರೆ.
ಅವರ ಪತ್ನಿ ಹೆಸರಿನಲ್ಲಿ ರು. 2.73 ಕೋಟಿ ಮೌಲ್ಯದ ಆಸ್ತಿ ಮತ್ತು ರು. 24 ಲಕ್ಷ ಸಾಲವೂ ಇದೆ. ಶಿವರಾಮ ಶೆಟ್ಟಿ ಮಲ್ಯಾಡಿ ಅವರ ಒಟ್ಟು ಆಸ್ತಿ ರು. 99,25,132 ರಷ್ಟಿದೆ. ಸುಮಾರು ರು. 1.07 ಲಕ್ಷ ಸಾಲ ಇದ್ದು, 9.16 ಲಕ್ಷ ಆಸ್ತಿ ತೆರಿಗೆ ಪಾವತಿಸಿದ್ದಾರೆ. ಲಾಲಾಜಿ ಮೆಂಡನ್ ಅವರ ಬಳಿ 62,28,302 ಆಸ್ತಿ ಇದ್ದು, 45,80,655 ಸಾಲ ಇರುವುದಾಗಿ ಘೋಷಿಸಿದ್ದಾರೆ.
ಸುನಿಲ್ ಕುಮಾರ್ ಅವರ ಒಟ್ಟು ಆಸ್ತಿ ರು. 89,02,582 ಗಳಾದರೆ ಪತ್ನಿಯ ಆಸ್ತಿ 61,34,737 ಆಗಿದೆ. ರು. 24.29 ಲಕ್ಷ ಸಾಲ ಮಾಡಿದ್ದಾರೆ..
ಸಿದ್ದರಾಮಯ್ಯ ಸ್ಥಿರಾಸ್ತಿ ರು. 4.10 ಕೋಟಿ
ಮೈಸೂರು: ನಂಜನಗೂಡಿನಲ್ಲಿ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಸ್ತಿಯ ಪ್ರಮಾಣ ಪತ್ರದ ವಿವರ.
ಸಿದ್ದರಾಮಯ್ಯ ಅವರ ಸ್ಥಿರಾಸ್ತಿ 4.10 ಕೋಟಿ, ಚರಾಸ್ತಿ 1.49 ಕೋಟಿ, ಸಾಲ 1.12 ಕೋಟಿ, ಚಿನ್ನಾಭರಣ 250 ಗ್ರಾಂ. ಇದೆ. ಪತ್ನಿ ಪಾರ್ವತಿ ಹೆಸರಿನಲ್ಲಿ ಸ್ಥಿರಾಸ್ತಿ 2.50 ಕೋಟಿ, ಚರಾಸ್ತಿ 25.31 ಲಕ್ಷ, ಸಾಲ 46.55 ಲಕ್ಷ, ಚಿನ್ನಾಭರಣ 540 ಗ್ರಾಂ ಎಂದು ಪ್ರಮಾಣ ಪತ್ರದಲ್ಲಿ ಸಲ್ಲಿಸಲಾಗಿದೆ.
ಸೋಮಶೇಖರ್, ರಾಜೀವ್ ಬಳಿ ಕೋಟಿ ಇದ್ದರೂ ಸಾಲ!
ಮೈಸೂರು: ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು 48,000 ಚರಾಸ್ತಿ, 2.75 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಎಲ್. ಕುಸುಮಾ ಅವರ ಹೆಸರಿನಲ್ಲಿ 17.60 ಲಕ್ಷ ಚರಾಸ್ತಿ, 4 ಲಕ್ಷ ಸ್ಥಿರಾಸ್ತಿ ಇದೆ. ಸೋಮಶೇಖರ್ ಅವರಿಗೆ 2.11 ಕೋಟಿ ಹಾಗೂ ಪತ್ನಿ ಕುಸುಮಾ ಅವರಿಗೆ 1.04 ಕೋಟಿ ಸಾಲ ಇದೆ.
ಕೆಜೆಪಿ ಅಭ್ಯರ್ಥಿ ಎಚ್.ವಿ. ರಾಜೀವ್ ಅವರು 1.66 ಕೋಟಿ ಚರಾಸ್ತಿ, 1.50 ಕೋಟಿ ಸ್ಥಿರಾಸ್ತಿ ಹೊಂದಿದ್ದು, 1.25 ಕೋಟಿ ಸಾಲ ಇದೆ. ಪತ್ನಿ ಎಂ.ಎಚ್. ಜಯಲಕ್ಷ್ಮಿ ಹೆಸರಿನಲ್ಲಿ 5.71 ಕೋಟಿ ಚರಾಸ್ತಿ, 12 ಲಕ್ಷ ಸ್ಥಿರಾಸ್ತಿ ಹೊಂದಿದ್ದು, 5.20 ಕೋಟಿ ಸಾಲ ಇದೆ.
ಚಾಮುಂಡೇಶ್ವರಿ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಂ. ಸತ್ಯನಾರಾಯಣ ಅವರು 32.44 ಲಕ್ಷ ಚರಾಸ್ತಿ, 69.15 ಲಕ್ಷ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಬಿ.ಎನ್. ನಿರ್ಮಲಾ ಹೆಸರಿನಲ್ಲಿ 4.98 ಲಕ್ಷ ಚರಾಸ್ತಿ ಮತ್ತು 20 ಲಕ್ಷ ಸ್ಥಿರಾಸ್ತಿ ಇದೆ.
ಬಿಜೆಪಿ ಅಭ್ಯರ್ಥಿ ಹೇಮಂತ್‌ಕುಮಾರ್ 11.98 ಲಕ್ಷ ಚರಾಸ್ತಿ, 23.55 ಲಕ್ಷ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಪತ್ನಿ ಶೋಭಾ ಅವರು 14.14 ಲಕ್ಷ ಮೌಲ್ಯದ ಚರಾಸ್ತಿ, 12 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement