ಅಕಲಂಕ ಪುರಸ್ಕಾರ: ಕೃತಿ ಆಹ್ವಾನ
ಉಡುಪಿ: ಅಖಿಲ ಕರ್ನಾಟಕ ಮಟ್ಟದ 2013ನೇ ಸಾಲಿನ 'ಅಕಲಂಕ' ಪುರಸ್ಕಾರಕ್ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಸಂಗೀತ ಅಥವಾ ಸಂಗೀತಗಾರರ ಕುರಿತು 2010ರಿಂದ 2013ರವರೆಗೆ ಪ್ರಕಟವಾದ ಅತ್ಯುತ್ತಮ ಕೃತಿಗೆ ಈ ಪುರಸ್ಕಾರ ಸಲ್ಲುತ್ತದೆ. ಪ್ರಶಸ್ತಿಯು 5 ಸಾವಿರ ನಗದು ಬಹುಮಾನ ಹೊಂದಿರುತ್ತದೆ. ಆಸಕ್ತರು ಪುಸ್ತಕದ 2 ಪ್ರತಿಗಳನ್ನು ಮೇ 20ರೊಳಗೆ ಡಾ.ಉಪ್ಪಂಗಳ ರಾಮ ಭಟ್, ಅಧ್ಯಕ್ಷರು, ಅಕಲಂಕ ಪ್ರತಿಷ್ಠಾನ (ರಿ), ಉಡುಪಿ, 'ಪರಾಶರ', 8-1-64ಬಿ, ಸುಧೀಂದ್ರ ತೀರ್ಥ ಮಾರ್ಗ, ಕುಂಜಿಬೆಟ್ಟು - 576102 ಇಲ್ಲಿಗೆ ಕಳುಹಿಬೇಕು. ಹೆಚ್ಚಿನ ಮಾಹಿತಿಗಾಗಿ 0820-252199 ಸಂಪರ್ಕಿಸಬೇಕಾಗಿ ಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷ ಉಪ್ಪಂಗಳ ರಾಮ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ಗಣಿಗಳಲ್ಲಿ ಐಸಿಎಫ್ಆರ್ಇ ಪರಿಶೀಲನೆ
ಸಂಡೂರು: ತಾಲೂಕಿನ ಎರಡು ಗಣಿ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ ಐಸಿಎಫ್ಆರ್ಇ ತಜ್ಞರ ತಂಡ, ಅಲ್ಲಿನ ಆರ್ ಆ್ಯಂಡ್ ಆರ್ (ಪರಿಸರ ಪುನಶ್ಚೇತನ ಮತ್ತು ಪುನರ್ನಿರ್ಮಾಣ) ಕಾರ್ಯದ ಪರಿಶೀಲನೆ ನಡೆಸಿತು. ವಿಜ್ಞಾನಿ ರಾಮರಾವ್ ನೇತೃತ್ವದ ತಂಡ ತಾಲೂಕಿನ ಸ್ವಾಮಿಮಲೈ ಬ್ಲಾಕ್ನಲ್ಲಿ ಬರುವ ಗಡಗಿ ಕಂಪನಿಗೆ ಸೇರಿದ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಮತ್ತೊಂದು ತಂಡ ವಿಜ್ಞಾನಿ ಸುಧೀರ್ ಕುಮಾರ್ ನೇತೃತ್ವದಲ್ಲಿ ಅದೇ ಬ್ಲಾಕ್ನಲ್ಲಿ ಬರುವ ಕುಮಾರಸ್ವಾಮಿ ಮೈನಿಂಗ್ ಕಂಪನಿಗೆ ಸೇರಿದ ಗಣಿ ಪ್ರದೇಶವನ್ನು ಪರಿಶೀಲಿಸಿತು. ಈ ಸಂದರ್ಭಧಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಉದಯಶಂಕರ್, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.