ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರೇಲ್ವೆ ಯಾತ್ರಿ ಸಂಘದಿಂದ ಸಹಾಯಾರ್ಥ ನಾಟಕ

Lingaraj Badiger
Updated On : 18 Apr 2013, 12:00 pm

ಉಡುಪಿ: ರೈಲು ಯಾತ್ರಿಕರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುವ ಉದ್ದೇಶದಿಂದ ನಿವೃತ್ತ ಸೇನಾಧಿಕಾರಿ ಆರ್.ಎಲ್. ಡಯಾಸ್  ಅವರ ಆಸಕ್ತಿಯಿಂದ 2002ರಲ್ಲಿ ಪ್ರಾರಂಭವಾದ ಉಡುಪಿ ರೇಲ್ವೆ ಯಾತ್ರಿ ಸಂಘ  ರೈಲು ಪ್ರಯಾಣಿಕರಿಗಾಗಿ ಹತ್ತು ಹಲವು ಸೌಕರ್ಯಗಳನ್ನು ತರುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಹೋರಾಟಗಳಿಗೆ ತಗಲುವ ವೆಚ್ಚವನ್ನು ಭರಿಸುವುದಕ್ಕೆ ಸಂಘಟನೆ ಆರ್ಥಿಕ ಸಮಸ್ಯೆ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘವನ್ನು ಆರ್ಥಿಕವಾಗಿ ಸುದೃಢಗೊಳಿಸುವುದಕ್ಕಾಗಿ ಸದಸ್ಯರು ನಾಟಕ ಪ್ರದರ್ಶನವೊಂದನ್ನು ಆಯೋಜಿಸುವುದಕ್ಕೆ ಹೊರಟಿದ್ದಾರೆ.
ಪ್ರಸ್ತುತ ಸಂಘದ ಸದಸ್ಯರು ಸದಸ್ಯತ್ವ ಶುಲ್ಕ ಎಂದು ರು. 200 ಪಾವತಿಸುತ್ತಿದ್ದರೂ, ಅದರಿಂದ ಸಂಘದ ಹೋರಾಟ, ಪದಾಧಿಕಾರಿಗಳ ಓಡಾಟ ಇತ್ಯಾದಿ ಖರ್ಚುಗಳನ್ನು ಸರಿದೂಗಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಘದ ಉಪಾಧ್ಯಕ್ಷ ಕೆ.ಆರ್. ಮಂಜ ಮತ್ತು ನಿರ್ದೇಶಕ ಶೇಖರ ಎನ್. ಕೋಟ್ಯಾನ್ ಅವರ ನೇತೃತ್ವದಲ್ಲಿ ಮೇ 23ರಂದು ನಗರದ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ನಾಟಕವೊಂದನ್ನು ಆಯೋಜಿಸಿದ್ದು, ಇದರ ಟಿಕೆಟುಗಳ ಮಾರಾಟದಿಂದ ಬಂದ ಹಣವನ್ನು ಠೇವಣಿಯಾಗಿಟ್ಟು ಅದರ ಬಡ್ಡಿಯಿಂದ ಸಂಘದ ಖರ್ಚುವೆಚ್ಚಗಳನ್ನು ನಿಭಾಯಿಸಲಾಗುವುದು. ಸಾರ್ವಜನಿಕರಿಗಾಗಿ ಹೋರಾಟ ನಡೆಸುತ್ತಿರುವ ಈ ಸಂಘದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸಬೇಕು ಎಂದು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement