'ಕಾಂಗ್ರೆಸ್-ಬಿಜೆಪಿ ಭ್ರಷ್ಟಾಚಾರದ ಎರಡು ಮುಖ'
ಕುಂದಾಪುರ: ಕಾಂಗ್ರೆಸ್, ಬಿಜೆಪಿಗೆ ಎಂದೂ ಪರ್ಯಾಯವಾಗದು, ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ರಾಜಕೀಯದಲ್ಲಿ ಭ್ರಷ್ಟಾಚಾರದ ಪಿಡುಗು ಬಿತ್ತಿ ಬೆಳೆಸಿದ ಕೀರ್ತಿ ಕಾಂಗ್ರೆಸಿಗೇ ಸಲ್ಲುತ್ತದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಪ್ರಸನ್ನ ಕುಮಾರ್ ಟೀಕಿಸಿದ್ದಾರೆ. ನೆಲ್ಲಿಕಟ್ಟೆಯಲ್ಲಿ ಸಿಪಿಎಂ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬೆಳಕಿಗೆ ಬಂದ ಅನೇಕ ಹಗರಣಗಳಿರುವಾಗ, ಭ್ರಷ್ಟಾಚಾರದಿಂದ ಮುಕ್ತವಾದ ಕಾಂಗ್ರೆಸ್ ಆಳ್ವಿಕೆ ಸಾಧ್ಯವೇ ಇಲ್ಲ ಎಂದು ಸಾಬೀತಾಗಿದೆ ಎಂದು ಅವರು ಟೀಕಿಸಿದರು. ಬೈಂದೂರು ಕ್ಷೇತ್ರದ ಅಭ್ಯರ್ಥಿ ಕೆ. ಶಂಕರ ಮಾತನಾಡಿದರು.