ಸುನಿಲ್ ಕುಮಾರ್ ಅಸಂಬದ್ಧ ಹೇಳಿಕೆ: ಗೋಪಾಲ ಭಂಡಾರಿ
ಕಾರ್ಕಳ: ಕಾರ್ಕಳದ ಮಾಜಿ ಶಾಸಕ ಸುನಿಲ್ ಕುಮಾರ್ ಅವರು ಚುನಾವಣಾ ಭಯದಿಂದಲೇ ಒಂದಲ್ಲ ಒಂದು ಅಸಂಬದ್ಧ ಹೇಳಿಕೆ ನೀಡಿ ಮತದಾರರನ್ನು ದಾರಿ ತಪ್ಪಿಸುವ ಕಾರ್ಯಕ್ಕೆ ಇಳಿದಿದ್ದಾರೆ ಎಂದು ಕಾರ್ಕಳ ಶಾಸಕ ಗೋಪಾಲ ಭಂಡಾರಿ ಆರೋಪಿಸಿದ್ದಾರೆ.
ನಗರದ ಪುಲ್ಕೇರಿಯಿಂದ ಆನೆಕೆರೆ, ಅನಂತಶಯನ ಮಾರ್ಗವಾಗಿ ಬಂಡೀಮಠದವರೆಗೆ ಬೃಹತ್ ರ್ಯಾಲಿ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸುನಿಲ್ ಕುಮಾರ್ ಬಿಜೆಪಿ ಬಹಿರಂಗ ಸಭೆಯಲ್ಲಿ ಸುಳ್ಳು ಆರೋಪ ಮಾಡಿ ಕೀಳು ಮಟ್ಟದ ರಾಜಕೀಯ ತೋರಿಸಿದ್ದಾರೆ. ಆದಿವಾಸಿಗಳ ಸಮುದಾಯವರಲ್ಲಿ ಸುಳ್ಳು ಮಾಹಿತಿ ಹರಡಿ ರಾಜಕೀಯ ಲಾಭ ಮಾಡಲು ಹೋಗಿ ವಿಫಲರಾದ ನಂತರ ಹಿಂದಿನ ಪುರಸಭಾ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದರು. ಅವರಿಗೆ ಪುರಸಭಾ ಚುನಾವಣೆಯಲ್ಲಿ ಜನತೆ ಸೋಲಿನ ಕಹಿ ನೀಡಿದ್ದಾರೆ ಎಂದರು.
ಈ ಸಂದರ್ಭ ಮಾತನಾಡಿದ ವೀರಪ್ಪ ಮೊಯ್ಲಿ, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದರು.