ಉಡುಪಿ: 46 ಮಂದಿ ಕಣದಲ್ಲಿ
ಉಡುಪಿ: ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ 46 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಹಿಂತೆಗೆಯಲು ಅಂತಿಮ ದಿನವಾದ ಶನಿವಾರ ಒಟ್ಟು 6 ಮಂದಿ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಅವರಲ್ಲಿ 5 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿದ್ದರೆ ಒಬ್ಬರು ಬಿಎಸ್ಆರ್ ಕಾಂಗ್ರೆಸ್ನ ಅಭ್ಯರ್ಥಿಯಾಗಿದ್ದಾರೆ.
ನಾಮಪತ್ರ ಹಿಂಪಡೆದವರು: ವಂದನಾ (ಪಕ್ಷೇತರ), ಕಾಪು ಕ್ಷೇತ್ರದಿಂದ ಹಮೀರ್ ಹಂಜಾ (ಪಕ್ಷೇತರ) ಮತ್ತು ಅಬೂಬಕ್ಕರ್ ಸಿದ್ದಿಕಿ (ಪಕ್ಷೇತರ), ಬೈಂದೂರು ಕ್ಷೇತ್ರದಿಂದ ಗಣೇಶ್ ಪ್ರಸಾದ್ ಶೆಟ್ಟಿ (ಪಕ್ಷೇತರ), ಕುಂದಾಪುರ ಕ್ಷೇತ್ರದಿಂದ ಇಬ್ರಾಹಿಂ (ಬಿಎಸ್ಆರ್ ಕಾಂಗ್ರೆಸ್) ಮತ್ತು ಹಿರಿಯಣ್ಣ (ಪಕ್ಷೇತರ).
ಕಾರ್ಕಳ
ಸುನಿಲ್ ಕುಮಾರ್(ಬಿಜೆಪಿ), ಕೆ.ಪಿ. ಪದ್ಮಾವತಿ (ಪಕ್ಷೇತರ), ಪ್ರವೀಣ್ ಪೂಜಾರಿ(ಕೆಜೆಪಿ), ಸುನಿಲ್ ಸೋನ್ಸ್(ಬಿಎಸ್ಪಿ), ವಾಲ್ಟರ್ ಡಿಸೋಜ (ಜೆಡಿಎಸ್), ಎಚ್. ಗೋಪಾಲ ಭಂಡಾರಿ (ಕಾಂಗ್ರೆಸ್), ಯು.ಕೆ. ಸಯ್ಯದ್(ಪಕ್ಷೇತರ), ರಿಯಾಜ್(ಪಕ್ಷೇತರ), ಗೋಪಾಲ (ಪಕ್ಷೇತರ) ಕಣದಲ್ಲಿದ್ದಾರೆ.
ಉಡುಪಿ
ಉಡುಪಿ ಕ್ಷೇತ್ರ - ತುಕಾರಾಂ ಕೋಟ್ಯಾನ್(ಪಕ್ಷೇತರ), ಬಿ. ಸುಧಾಕರ ಶೆಟ್ಟಿ (ಬಿಜೆಪಿ), ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್), ಅಲೆವೂರು ಯೋಗೇಶ್ ಆಚಾರ್ಯ (ಪಕ್ಷೇತರ), ಮಂಜುನಾಥ್ ವಿ, (ಬಿಎಸ್ಪಿ), ಬಾರ್ಕೂರು ಸತೀಶ್ ಪೂಜಾರಿ(ಜೆಡಿಎಸ್), ನಾಸಿರ್ ಹುಸೇನ್ (ಪಕ್ಷೇತರ)ಕಣದಲ್ಲಿದ್ದಾರೆ.
ಕಾಪು
ಲಾಲಾಜಿ ಆರ್. ಮೆಂಡನ್(ಬಿಜೆಪಿ), ಅಬ್ದುಲ್ ಹಕೀಂ (ಪಕ್ಷೇತರ), ರೋನಾಲ್ಡ್ ಕಾಸ್ಟೆಲಿನೋ (ಪಕ್ಷೇತರ), ಶ್ರೀಕಾಂತ ಬಿ. ಆಚಾರ್ಯ (ಪಕ್ಷೇತರ), ಕಾಸಿಂ (ಪಕ್ಷೇತರ), ಹಮೀದ್(ಪಕ್ಷೇತರ), ವಿನಯ ಕುಮಾರ್ ಸೊರಕೆ(ಕಾಂಗ್ರೆಸ್), ವಸಂತ ಸಾಲಿಯಾನ್(ಜೆಡಿಎಸ್), ಪ್ರವೀಣ್ ಕುಮಾರ್(ಪಕ್ಷೇತರ), ವಿಜಯ ಕುಮಾರ್ ಹೆಗ್ಡೆ(ಪಕ್ಷೇತರ), ಸ್ಟೀಫನ್ ರಿಚರ್ಡ್ ಲೋಬೋ(ಪಕ್ಷೇತರ).
ಬೈಂದೂರು
ಅಬ್ದುಲ್ ಅಜೀದ್ (ಪಕ್ಷೇತರ), ಲೋಕೇಶ್ ವಿಠಲ್ ಬೋರ್ಕರ್ (ಪಕ್ಷೇತರ), ಕೆ. ಗೋಪಾಲ ಪೂಜಾರಿ (ಕಾಂಗ್ರೆಸ್), ಕೆ. ಶಂಕರ್(ಸಿಪಿಎಂ), ಉದಯ ಕುಮಾರ್ ತಲ್ಲೂರು(ಬಿಎಸ್ಪಿ), ಮಂಜುನಾಥ್ ಕೆ, (ಜೆಡಿಯು), ಶ್ರೀಧರ ಪೇದೆಮನೆ (ಪಕ್ಷೇತರ), ಬಿ.ಎಂ. ಸುಕುಮಾರ ಶೆಟ್ಟಿ (ಬಿಜೆಪಿ), ನವೀನ್ ಚಂದ್ರ ಉಪ್ಪುಂದ (ಕೆಜೆಪಿ), ಸುರಯ್ಯಾ ಭಾನು (ಜೆಡಿಎಸ್), ಎಚ್. ಸುರೇಶ್ ಪೂಜಾರಿ (ಪಕ್ಷೇತರ), ದಿವಾಕರ ಕೋಟ್ಯಾನ್(ಪಕ್ಷೇತರ), ಅಬ್ದುಲ್ ಅಜೀಜ್(ಪಕ್ಷೇತರ).
ಕುಂದಾಪುರ
ಕಿಶೋರ್ ಕುಮಾರ್(ಬಿಜೆಪಿ), ಹಾಲಾಡಿ ಶ್ರೀನಿವಾಸ ಶೆಟ್ಟಿ (ಪಕ್ಷೇತರ), ಮಲ್ಯಾಡಿ ಶಿವರಾಮ ಶೆಟ್ಟಿ (ಕಾಂಗ್ರೆಸ್), ಕೃಷ್ಣ ಭರತ್ ಕಲ್ಯ(ಜೆಡಿಯು), ಶ್ರೀನಿವಾಸ ಹರಿಜನ (ಪಕ್ಷೇತರ), ಮಂಜುನಾಥ್(ಪಕ್ಷೇತರ) ಕಣದಲ್ಲಿದ್ದಾರೆ.