7ಅಪ್ 'ಡ್ಯಾನ್ಸ್ ಆನ್': ಉಡುಪಿ, ಮಂಗಳೂರಿಂದ 4 ತಂಡ ಆಯ್ಕೆ
ಮಂಗಳೂರು: 7ಅಪ್ನ 'ಡ್ಯಾನ್ಸ್ ಆನ್' ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೋಳ್ಳಲು ಮಂಗಳೂರು ಮತ್ತು ಉಡುಪಿಯಿಂದ ನಾಲ್ಕು ನೃತ್ಯ ತಂಡಗಳು ಆಯ್ಕೆಯಾಗಿದೆ.
ಮಂಗಳೂರಿನಿಂದ ಬೆಸೆಂಟ್ ಮಹಿಳಾ ಕಾಲೇಜ್, ಸಿಝ್ಮಿಂಗ್ ಗೈಸ್, ಓಷನ್ ಕಿಡ್ಸ್ ಹಾಗೂ ಉಡುಪಿಯಿಂದ ಸ್ಮಾರ್ಟ್ ಗೈಸ್ ಡ್ಯಾನ್ಸ್ ಗ್ರೂಪ್ ಮುಂದಿನ ಸಾಮಾನ್ಯ ಎಲಿಮಿನೇಶನ್ ಹಂತ ತಲುಪಿದೆ.
ಜಿಲ್ಲೆಯ 15 ನಗರದಲ್ಲಿ ನಡೆದ ಮೊದ ಸುತ್ತಿನ ಸಿಟಿ ಅಡಿಷನ್ಗಳಲ್ಲಿ ಈ ತಂಡ ಆಯ್ಕೆಯಾಗಿದೆ. ಚೆನ್ನೈ ಎಸ್ಆರ್ಟಿ ಹಾಗೂ 7ಅಪ್ ಬ್ರಾಂಡ್ ಅಂಬಾಸಿಡರ್ ಆಗಿರುವ ಪುನೀತ್ ರಾಜ್ಕುಮಾರ್ ಮೇ. 14 ರಂದು ನಡೆಯುವ ಅಂತಿಮ ಸುತ್ತಿನಲ್ಲಿ ತೀರ್ಪು ನೀಡುವರು. ವಿಜಯಿ ತಂಡಕ್ಕೆ ರು. 51ಲಕ್ಷ ಗೆಲ್ಲುವ ಅವಕಾಶವಿದೆ.
ಏಪ್ರಿಲ್ ಅಂತ್ಯಕ್ಕೆ ನೃತ್ಯ ತಂಡಗಳಿಗೆ ವೇದಿಕೆ ಸಜ್ಜಾಗಲಿದೆ. ಏ. 26 ರಂದು ನಡೆಯುವ ಅಂತರ್ರಾಜ್ಯ ಅಡಿಶನಲ್ನಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶದಿಂದ ಒಟ್ಟು 32 ತಂಡಗಳು ಹಾಗೂ ತಮಿಳುನಾಡಿನಿಂದ ಒಟ್ಟು 28 ತಂಡಗಳು ಸ್ಪರ್ಧಿಸುವರು.
7ಅಪ್ 'ಡ್ಯಾನ್ಸ್ ಆನ್' ವಿಜೇತರಿಗೆ ರು. 21 ಲಕ್ಷ, ಮೊದಲ ರನ್ನರ್ಸ್ ಅಪ್ಗೆ ರು. 15 ಲಕ್ಷ, 2ನೇ ರನ್ನರ್ಸ್ ಅಪ್ಗೆ ರು. 7ಲಕ್ಷ ಹಾಗೂ ಉಳಿದ 4 ತಂಡಗಳಿಗೆ ತಲಾ ರು. 2ಲಕ್ಷ ಪಡೆಯುವರು ಎಂದು ಪ್ರಕಟಣೆ ತಿಳಿಸಿದೆ.