ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೊಂಕಣಿ ನಕ್ಷತ್ರ ಗೌರವ ಪ್ರದಾನ

Lingaraj Badiger
Updated On : 22 Apr 2013, 12:31 pm

ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ಕೊಂಕಣಿ ಅಕಾಡೆಮಿಯ ಕೊಂಕಣಿ ಮಾಂಟೊವ್ ವೇದಿಕೆಯಲ್ಲಿ ಜರುಗಿದ 'ಕೊಂಕಣಿ ಕವಿತಾಮೃತ' ಸಮಾರಂಭದಲ್ಲಿ ಕಾರ್ಕಳದ ಹಿರ್ಗಾನದ ಶ್ರೀ ಕ್ಷೇತ್ರ ಲಕ್ಷ್ಮೀಪುರ ಆದಿಶಕ್ತಿ ಮಹಾಲಕ್ಷ್ಮೀ ದೇವಳದ ಆಡಳಿತ ಮೊಕ್ತೇಸರ ಯರ್ಲಪಾಡಿ ಸೆಟ್ಟಿಬೆಟ್ಟು ನಾರಾಯಣ ಗವಳ್ಕರ್ ಅವರ ಕೊಂಕಣಿ ಸಾಹಿತ್ಯ ಸೇವೆಯನ್ನು ಗುರುತಿಸಿ ಕೊಂಕಣಿ ನಕ್ಷತ್ರ ಗೌರವ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕಾಸರಗೋಡು ಚಿನ್ನಾ, ಹಿರಿಯ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ, ಖ್ಯಾತ ಕೊಂಕಣಿ ಸಾಹಿತಿ ಎಡ್ವಿನ್ ಜೆ.ಎಫ್. ಡಿ' ಸೋಜ ಅವರನ್ನು ಸನ್ಮಾನಿಸಿದರು.
ಈ ಸಮಾರಂಭದಲ್ಲಿ ಕೊಂಕಣಿ ಸಂಘಟಕ ಡೆಚ್ಚಾರು ಗಣಪತಿ ಶೆಣೈ, ಅಕಾಡೆಮಿಯ ರಿಜಿಸ್ಟಾರ್ ಡಾ. ದೇವದಾಸ್ ಪೈ, ಅಕಾಡೆಮಿ ಸದಸ್ಯ ರಾಯ್ ಕ್ಯಾಸ್ತಲಿನೊ, ಮಹೇಶ ಆರ್. ನಾಯಕ್, ಓಂ. ಗಣೇಶ್, ಅಶೋಕ್ ಶೇಟ್, ನಿಕಟಪೂರ್ವ ಸದಸ್ಯ ಬಿ. ಪುಂಡಲೀಕ ಮರಾಠೆ ಶಿರ್ವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement