ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಯಕ್ಷಗಾನ ಮೂಲಕ ಮತದಾನ ಅರಿವು

Lingaraj Badiger
Updated On : 24 Apr 2013, 11:20 am

ಬ್ರಹ್ಮಾವರ: ಮತದಾನ ಪ್ರತಿಯೊಬ್ಬರ ಹಕ್ಕು, ಅದನ್ನು ನಿರ್ಭೀತಿಯಿಂದ ಚಲಾಯಿಸಬೇಕು. ಇರುವವರಲ್ಲಿ ಉತ್ತಮ  ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸುಭದ್ರ ಸರ್ಕಾರ ರಚನಗೆ ಕೊಡುಗೆ ನೀಡಬೇಕು, ಬಲಿಷ್ಟ ಪ್ರಜಾಪ್ರಭುತ್ವಕ್ಕೆ ಅಮೂಲ್ಯ ಕೊಡುಗೆ ನೀಡಬೇಕು ಎಂದು ಬ್ರಹ್ಮಾವರದ ವಾರಂಬಳ್ಳಿಯ ಗ್ರಾಪಂ ಕಾರ್ಯದರ್ಶಿ ಮುತ್ತು ಕರೆ ನೀಡಿದರು.
ಅವರು ಇಲ್ಲಿನ ವಾರಂಬಳ್ಳಿ ಗ್ರಾಪಂ ಆವರಣದಲ್ಲಿ ಚುನಾವಣಾ ಆಯೋಗ ಮತ್ತು ಜಿಪಂ ಆಶ್ರಯದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಇತ್ತೀಚಿಗೆ ನಡೆದ ಮತದಾರರಿಗೆ ಮತದಾನ ಅರಿವು ಎಂಬ ಯಕ್ಷಗಾನ ಪ್ರದರ್ಶನವನ್ನು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ತಂಡದ ವ್ಯವಸ್ಥಾಪಕ ಸುದರ್ಶನ ಉರಾಳ, ಇಂದು ನಗರದ ಜನರು ಮನೆಯಲ್ಲಿಯೇ ಕುಳಿತು ಮತದಾನ ಎಷ್ಟು ಆಯಿತು ಎಂದು ಹೇಳುತ್ತಾರೆ. ಆದರೆ ಅವರು ಮತ ಚಲಾಯಿಸದೇ ತಮ್ಮ ಕರ್ತವ್ಯವನ್ನು ಮರೆಯುತ್ತಿದ್ದಾರೆ ಎಂದು ಬೇಸರಿಸಿದ ಅವರು ಯಾವುದೇ ಆಮಿಷಗಳಿಗೆ ಮತವನ್ನು ಮಾರಬೇಡಿ ಎಂದು ಕೋರಿದರು.
ಕಾರ್ಯಕ್ರಮವನ್ನು ಭಾಗವತ ಲಂಬೋದರ ಹೆಗಡೆ ನಿರ್ವಹಿಸಿದರು. ನಂತರ ಸುದರ್ಶನ ಉರಾಳರ ಮಾರ್ಗದರ್ಶನದಲ್ಲಿ ಮತದಾರರಿಗೆ ಮತದಾನದ ಅರಿವು ಬಗ್ಗೆ ಯಕ್ಷಗಾನ ಪ್ರದರ್ಶಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement