ಕಲ್ಮಾಡಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ
ಉಡುಪಿ: ರಾಜ್ಯದ ಬಿಜೆಪಿ ಸರ್ಕಾರದ ವಸತಿ ಯೋಜನೆಯ ಸಹಾಯಧನವನ್ನು 50 ಸಾವಿರದಿಂದ 75 ಸಾವಿರಕ್ಕೆ ಏರಿಸಲಾಗಿದೆ. ಬಡವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ದೇಶಕ್ಕೆ ಮಾದರಿ ಎನಿಸಿದೆ. ಉಡುಪಿ ಸಹಿತ ಜಿಲ್ಲೆಯಲ್ಲಿ ಸಾವಿರಾರು ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು. ಅವರು ಶುಕ್ರವಾರ ಕಲ್ಮಾಡಿಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ, ನಗರಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಬಿಜೆಪಿ ಮುಖಂಡರಾದ ರಾಘವೇಂದ್ರ ಕಿಣಿ, ವಾಸುದೇವ ಭಟ್ ಪೆರಂಪಳ್ಳಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮತ್ತು ಜಿಲ್ಲಾ ಕಮಲ್ ಕ್ಲಬ್‌ನ ಅಧ್ಯಕ್ಷ ಶಶಾಂಕ ಶಿವತ್ತಾಯ ಮೊದಲಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ಬಿಜೆಪಿ ಮುಂದಾಳುಗಳಾದ ಕುಯಿಲಾಡಿ ಸುರೇಶ ನಾಯಕ್, ಎಂ. ಲಕ್ಷ್ಮೀಶ ಬಂಗೇರ, ಎಂ. ಸುರೇಶ್ ಮಲ್ಪೆ, ಇಂದಿರಾ ಶೇಖರ್, ಸುಂದರ ಕಲ್ಮಾಡಿ, ಚಂದ್ರಾವತಿ ಎಸ್. ಕೋಟ್ಯಾನ್, ಫ್ರಾನ್ಸಿಸ್ ಮೆನೇಜಸ್ ಮೊದಲಾದವರಿದ್ದರು.
--