ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಜೆಡಿಎಸ್ ಗೆದ್ದರೆ ನಾಲ್ಕು ಪಪಂ ರಚನೆ: ದೇವಿಪ್ರಸಾದ್

Lingaraj Badiger
Updated On : 29 Apr 2013, 11:55 am

ಕಾಪು: ಚುನಾವಣೆಯಲ್ಲಿ ಕಾಪು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ವಸಂತ ವಿ. ಸಾಲ್ಯಾನ ಅವರನ್ನು ಆರಿಸಿ ಕಳುಹಿಸಿದರೆ ಕ್ಷೇತ್ರದ ಕಾಪು, ಪಡುಬಿದ್ರಿ, ಶಿರ್ವ ಮತ್ತು ಕಟಪಾಡಿ ಗ್ರಾಪಂಗಳನ್ನು ಪಟ್ಟಣ ಪಂಚಾಯತುಗಳಾಗಿ ಪರಿವರ್ತಿಸಲಾಗುವುದು. ಜತೆಗೆ ಈ ಗ್ರಾಪಂಗಳ ಗಂಭೀರ ಸಮಸ್ಯೆಯಾಗಿರುವ ಒಳಚರಂಡಿಗೆ ಶಾಶ್ವತ ವೈಜ್ಞಾನಿಕ ಪರಿಹಾರ ಒದಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಇಲ್ಲಿಗೆ ಸಮೀಪದ ಕಂಚಿನಡ್ಕದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲಾಗುವುದು, ಬೆಳಪು ಮತ್ತು ಪಡುಬಿದ್ರಿಯಲ್ಲಿ ಸಣ್ಣ ಕೈಗಾರಿಕಾ ಪಾರ್ಕ್‌ಗಳ ರಚನೆ, ಕಾಪು ಮತ್ತು ಪಡುಬಿದ್ರಿಯಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಹಿರಿಯಡ್ಕದಲ್ಲಿ ಕೃಷಿ ವಿವಿ ಮತ್ತು ಬೆಳಪುವಿನಲ್ಲಿ ಈಗಾಗಲೇ ಪ್ರಸ್ತಾವಿತ ಉಡುಪಿ ವಿವಿಯ ನಿರ್ಮಾಣ ಮುಂತಾದವು ಜೆಡಿಎಸ್‌ನ ಗುರಿಗಳಾಗಿವೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಅಭ್ಯರ್ಥಿ ವಸಂತ ಸಾಲ್ಯಾನ್, ಪಕ್ಷದ ನಾಯಕರಾದ ವಾಸುದೇವ ರಾವ್, ಎ.ಕೆ. ಸುಲೈಮಾನ್, ಉದಯ ಹೆಗ್ಡೆ, ಕೆಂಚನೂರು ಶಾಲಿನಿ ಶೆಟ್ಟಿ, ಯೋಗೀಶ್ ಶೆಟ್ಟಿ ಕಾಪು ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement