'ಬಿಜೆಪಿ ಅಪಪ್ರಚಾರಕ್ಕೆ ಜನರಿಂದಲೇ ಸೂಕ್ತ ಉತ್ತರ'
ಉಡುಪಿ: ಪ್ರತಿ ಬಾರಿ ಚುನಾವಣಾ ಸಂದರ್ಭ ವಿರೋಧಿ ಅಭ್ಯರ್ಥಿಗಳ ಬಗ್ಗೆ ಅಪಪ್ರಚಾರ ಮಾಡುವ ಬಿಜೆಪಿ ಪಕ್ಷದ ಕುಟಿಲ ತಂತ್ರಗಾರಿಕೆ ಈ ಬಾರಿ ಫಲಿಸದು. ಆದರೂ, ಬಿಜೆಪಿ ಈ ಕುಟಿಲ ತಂತ್ರವನ್ನು ಮುಂದುವರಿಸಿದ್ದೇ ಆದಲ್ಲಿ ಪಕ್ಷದ ಕಾರ್ಯಕರ್ತರು ಮೂಕ ಪ್ರೇಕ್ಷಕರಾಗದೆ ಸೂಕ್ತ ರೀತಿಯಲ್ಲಿ ಉತ್ತರಿಸಲಿದ್ದಾರೆ ಎಂದು ಉಡುಪಿಯ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಎಚ್ಚರಿಸಿದ್ದಾರೆ.
ಅವರು ನಗರದ ಪೆರಂಪಳ್ಳಿ, ದೊಡ್ಡಣಗುಡ್ಡೆ, ನಿಟ್ಟೂರು ವಾರ್ಡ್ಗಳಲ್ಲಿಯ ಪ್ರಚಾರ ಸಭೆಗಳಲ್ಲಿ ಮಾತನಾಡುತ್ತಿದ್ದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ದಿವಾಕರ ಕುಂದರ್, ಕಿಷನ್ ಹೆಗ್ಡೆ ಕೊಳ್ಕೆಬೈಲ್, ಕೇಶವ ಎಂ. ಕೋಟ್ಯಾನ್, ಯತೀಶ್ ಕರ್ಕೇರಾ, ಭಾಸ್ಕರ ರಾವ್ ಕಿದಿಯೂರು, ದಿನೇಶ್ ಪುತ್ರನ್, ಅಮೃತ್ ಶೆಣೈ, ಕುಶಾಲ ಶೆಟ್ಟಿ ಇಂದ್ರಾಳಿ, ಸದಾಶಿವ ಕೋಟ್ಯಾನ್ ಕೊಡಂಕೂರು, ಸೆಲಿನಾ ಕರ್ಕಡ, ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು, ಸುಭಾಷ್ ಮಲ್ಪೆ, ಕೃಷ್ಣಮೂರ್ತಿ ಆಚಾರ್ಯ, ಮಿಥುನ್ ಅಮೀನ್, ಯೋಗಿಶ್ ಶೇಟ್, ಸುನೀಲ್ ಕಪ್ಪೆಟ್ಟು, ಜನಾರ್ದನ ಭಂಡಾರ್ಕರ್, ಪ್ರಶಾಂತ್ ಭಟ್ ಮೊದಲಾದವರು ಇದ್ದರು.