ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬಿಜೆಪಿಯಿಂದ ಮಸೀದಿ, ಚರ್ಚ್‌ಗಳಿಗೆ ಅನುದಾನ: ಅಬೂಬಕ್ಕರ್

Lingaraj Badiger
Updated On : 29 Apr 2013, 11:55 am

ಉಡುಪಿ: ಬಿಜೆಪಿ ಸರ್ಕಾರ ಮಠಗಳಿಗೆ ಮಾತ್ರ ಕೋಟ್ಯಂತರ ಹಣ ನೀಡುತ್ತಿದೆ ಎನ್ನುವ ಆರೋಪ ಸುಳ್ಳು. ದರ್ಗಾಗಳಿಗೂ, ಮಸೀದಿ, ಚರ್ಚುಗಳಿಗೂ ಕೋಟ್ಯಂತರ ರು. ಹಣ ನೀಡಿದೆ. ಆದ್ದರಿಂದ ಅಲ್ಪಸಂಖ್ಯಾತರು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ಅಬೂಬಕ್ಕರ್ ಎನ್.ಬಿ. ಮನವಿ ಮಾಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005- 06ರಲ್ಲಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಕೇವಲ ರು. 35 ಕೋಟಿಗಳನ್ನಷ್ಟೇ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷ 2008- 09ರಲ್ಲಿ ರು. 128.98 ಕೋಟಿ, 2012- 13ರಲ್ಲಿ ರು. 407 ಕೋಟಿ ಒಟ್ಟು 5 ವರ್ಷಗಳಲ್ಲಿ ರು. 1313.96 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಸಲೀಂ ಅಂಬಾಗಿಲು, ಕಾರ್ಯದರ್ಶಿ ರಹಮತ್ ಹೊನ್ನಾಳ, ಬಿಜೆಪಿ ನಾಯಕರಾದ ಕರಾಮತ್ ಆಲಿ, ಸಂಧ್ಯಾ ನಾಯಕ್ ಕುಂಜಿಬೆಟ್ಟು ಇದ್ದರು.
--
ಬೆಳ್ಳಿಬೆಟ್ಟು ಆಲಡೆ: ಆಯನೋತ್ಸವ, ಸಿರಿಗಳ ಜಾತ್ರೆ
ಪಡುಬಿದ್ರಿ: ಇಲ್ಲಿನ, ತುಳು ಜಾನಪದದ ಸಿರಿಕುಮಾರನ ಆದಿನೆಲೆ ಎಂಬ ಪ್ರಸಿದ್ಧಿಯ ಬೊಳ್ಳೆಟ್ಟು ಯಾನೆ ಬೆಳ್ಳಿಬೆಟ್ಟು ಆಲಡೆಯಲ್ಲಿ ಸೋಮವಾರ ರಾತ್ರಿ 'ಆಯನೋತ್ಸವ' ಹಾಗೂ 'ಸಿರಿಗಳ ಜಾತ್ರೆ' ವಿಜೃಂಭಣೆಯಿಂದ ನಡೆಯಿತು.
ಪ್ರತಿವರ್ಷ ಇಲ್ಲಿಗೆ ಜಿಲ್ಲೆ, ಹೊರಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು ದೇವರ ದರ್ಶನ ಪಡೆದು ಕಾಣಿಕೆ- ಪ್ರಾರ್ಥನೆ ಒಪ್ಪಿಸುತ್ತಾರೆ. ನೂರಾರು ಮಂದಿ ಪ್ರತಿವರ್ಷದಂತೆ ಸಿರಿ- ಕುಮಾರ ದೈವಗಳನ್ನು ಮೈದುಂಬಿಕೊಂಡು ಹರಕೆ ಸಲ್ಲಿಸುತ್ತಾರೆ. ಇಲ್ಲಿ ಬ್ರಹ್ಮಲಿಂಗೇಶ್ವರ ಸಾನಿಧ್ಯದೇವರಾದರೆ, ಗಣಪತಿ, ವೀರಭದ್ರ, ನಂದಿಗೋಣ, ರಕ್ತೇಶ್ವರಿ, ಸಿರಿ, ಕುಮಾರರು, ಗುರುಸಂಕಲ್ಪ, ವ್ಯಾಘ್ರಚಾಮುಂಡಿ, ಮೈಸಂದಾಯ, ಪಂಜುರ್ಲಿ, ಜುಮಾದಿ ಬಂಟ ಮೊದಲಾದವುಗಳು ಪರಿವಾರ ಶಕ್ತಿಗಳಾಗಿ ಇಲ್ಲಿ ಪೂಜೆಗೊಳ್ಳುತ್ತವೆ.
ದೇವಳದ ಪ್ರಧಾನ ಅರ್ಚಕ, ಆಡಳಿತ ಮೊಕ್ತೇಸರ ಬಾಲಕೃಷ್ಣ ಭಟ್ ಬೆಳ್ಳಿಬೆಟ್ಟು, ಆಡಳಿತ ಮೊಕ್ತೇಸರ ನಾಗೇಶ ರಾವ್, ಆಡಳಿತ ಮಂಡಳಿ ಅಧ್ಯಕ್ಷ ಯುವರಾಜ್ ಶೆಟ್ಟಿ ಎಲ್ಲೂರುಗುತ್ತು, ಸದಸ್ಯ ದೇವಿಪ್ರಸಾದ್, ಎಲ್ಲೂರು ಗ್ರಾಪಂ ಸದಸ್ಯ ಜಯಂತ ಕುಮಾರ್ ಸಜೆ, ಎಲ್ಲೂರು ದೇವಳದ ಆಡಳಿತ ಮಂಡಳಿಯ ವೈ. ಪ್ರಪುಲ ಶೆಟ್ಟಿ ನಾರಾಯಣ ಶೆಟ್ಟಿ ಮತ್ತಿತರ ಗಣ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement