ಮತದಾರರ ಪಟ್ಟಿಯಿಂದ ಕುಟುಂಬದ ನಾಲ್ವರ ಹೆಸರು ವಜಾ: ದೂರು
ಉಡುಪಿ: ಮನೆ ಬದಲಾಯಿಸಲಾಗಿದೆ ಎಂದು ತೆಂಕ ಎರ್ಮಾಳ್ ಗ್ರಾಮ ಪಂಚಾಯಿತಿನ ಒಂದೇ ಕುಟುಂಬದ 4 ಜನರ ಹೆಸರನ್ನು ಮತದರಾರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಿರುವುದರ ವಿರುದ್ಧ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ಚುನಾವಣಾಧಿಗಳಿಗೆ ದೂರು ನೀಡಿದೆ. ವಜೀರ್ ಅಹಮ್ಮದ್ ಎಂಬವರು ತೆಂಕ ಎರ್ಮಾಳ್ ಗ್ರಾಮದಲ್ಲಿದ್ದ ಸ್ವಂತ ಮನೆಯನ್ನು ಮಾರಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಏಕೈಕ ಕಾರಣದಿಂದ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಿ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪಂಚಾಯಿತಿನ ಗ್ರಾಮಕರಣಿಕರಿಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲದ ಕಾರಣ ಬುಧವಾರ ಮಹಿಳಾ ಕಾಂಗ್ರೆಸ್ ವತಿಯಿಂದ ಚುನಾವಣಾಧಿಕರಿಗೆ ದೂರು ನೀಡಲಾಯಿತು. ಸ್ಥಳೀಯರ ಒತ್ತಡಕ್ಕೆ ಮಣಿದು ಈ 4 ಮತದಾರರ ಹೆಸರನ್ನು ವಜಾ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವೆರೋನಿಕ ಕನೇಲಿಯೋ, ಕಾಂಗ್ರೆಸ್ ನಾಯಕಿಯರಾದ ಗೀತಾ ವಾಗ್ಳೆ, ಕಾಮಕ್ಷಿ, ನೂರ್‌ಜಹಾನ್ ಇದ್ದರು.