ಕಾರ್ಕಳ ಮಾದರಿ ಕ್ಷೇತ್ರವನ್ನಾಗಿಸುವೆ: ಸುನಿಲ್ ಕುಮಾರ್
ಕಾರ್ಕಳ: ಈ ಬಾರಿ ನಾವು ಗೆಲ್ಲುವುದು ಖಚಿತ. ಈಗಾಗಲೇ ನಮ್ಮ ಪಕ್ಷದ ಕಾರ್ಯಕರ್ತರು ಎಲ್ಲಾಕಡೆ ಪ್ರಚಾರದಲ್ಲಿ ತೊಡಗಿದ್ದಾರೆ. ಉತ್ತಮ ರೀತಿಯ ಅಭಿಪ್ರಾಯಗಳು ಕಂಡುಬಂದಿದೆ. ಹೆಬ್ರಿಯಲ್ಲಿ ನಡೆದ ವರುಣ್ ಗಾಂಧಿಯ ಕಾರ್ಯಕ್ರಮ ನೋಡಿ ಕಾಂಗ್ರೆಸ್ ನಾಯಕರಿಗೆ ದಿಕ್ಕು ತೋಚದಂತಾಗಿದೆ. ಅಲ್ಲದೆ ನಾನು ಈ ಬಾರಿ ಕ್ಷೇತ್ರದ ಜನರಿಗೆ ಉತ್ತಮ ಆಡಳಿತ ಹಾಗೂ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಇದು ಭರವಸೆ ಅಲ್ಲ, ವಾಗ್ದಾನ ಎಂದು ಸುನಿಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬೋಳ ಪ್ರಭಾಕರ್ ಕಾಮತ್, ಮಣಿರಾಜ್ ಶೆಟ್ಟಿ ಹಾಗು ಇತರರು ಉಪಸ್ಥಿತರಿದ್ದರು.