ಕೆಥೋಲಿಕ್ ಯುವ ಸಂಚಲನ: ವಲಯ ಸಮ್ಮೇಳನ ಉದ್ಘಾಟನೆ
ಉಡುಪಿ: ಯುವಜನರು ಇಂದು ವಿವಿಧ ರೀತಿಯ ಗೊಂದಲಗಳ ನಡುವೆ ಬದುಕುತ್ತಿದ್ದಾರೆ. ಅವರ ಜೀವನ ಕವಲು ದಾರಿಯಲ್ಲಿ ಸಾಗುತ್ತಿದ್ದು, ಇಂತಹ ಗೊಂದಲಗಳಿಗೆ ಪರಿಹಾರ ನೀಡುತ್ತಿರುವ ಐಸಿವೈಎಂ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಇಲ್ಲಿನ ಡಾನ್ಬಾಸ್ಕೋ ಹಾಲ್ನಲ್ಲಿ ಭಾನುವಾರ ಉಡುಪಿ ವಲಯ ಮಟ್ಟದ ಭಾರತೀಯ ಕೆಥೋಲಿಕ್ ಯುವ ಸಂಚಲನದ ವಲಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೈಸ್ತ ಸಮುದಾಯದ ಯುವ ಜನರು ಸಮಾಜ ಸೇವೆಯ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ವಲಯದ ಪ್ರಧಾನ ಧರ್ಮಗುರು ಫ್ರೆಡ್ಮಸ್ಕರೇನ್ಹಸ್ ಮಾತನಾಡಿ, ಯುವಜನರು ತಮ್ಮ ಸೇವೆಯನ್ನು ಸಮಾಜಕ್ಕೆ ನೀಡುವ ಮೂಲಕ ಪ್ರಜ್ವಲಿಸುವ ಜ್ಯೋತಿಯಾಗಿ ಮೂಡಿಬರಬೇಕು. ಸೇವೆಯೊಂದಿಗೆ ಸಮಾಜದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಬೇಕು ಎಂದರು. ಐಸಿವೈಎಂ ವಲಯ ಸಮಿತಿ ನಿರ್ದೇಶಕ ಆಲ್ಬನ್ ಡಿ'ಸೋಜಾ, ವಲಯಾಧ್ಯಕ್ಷ ರೋಶನ್, ಉಡುಪಿ ಘಟಕ ಅಧ್ಯಕ್ಷ ರೋಯ್ ಡಿ'ಸೋಜಾ, ಕಾರ್ಯದರ್ಶಿ ವಿವಿಲಾ, ಐಸಿವೈಎಂ ಧರ್ಮಪ್ರಾಂತ್ಯದ ಉಪಾಧ್ಯಕ್ಷೆ ರೀನಲ್, ವಲಯ ಸಚೇತಕರಾದ ಮ್ಯಾಕ್ಷಿಂ ಡೇಸಾ ಇದ್ದರು.
ಉಡುಪಿ ವಲಯದ ಕಟಪಾಡಿ, ಉದ್ಯಾವರ, ಕಲ್ಮಾಡಿ, ಪೆರಂಪಳ್ಳಿ, ಉಡುಪಿ, ಮೂಡುಬೆಳ್ಳೆ, ಕುಂತಲನಗರ ಧರ್ಮಕೇಂದ್ರಗಳ ಯುವಜನರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಐಸಿವೈಎಂ ವಲಯ ಸಮಿತಿ ವತಿಯಿಂದ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಸನ್ಮಾನಿಸಲಾಯಿತು.