ರೋಟರಿ ಸೌಹಾರ್ದ ಸಮ್ಮಿಲನ ಕಾರ್ಯಕ್ರಮ
ಉಡುಪಿ: ಇಲ್ಲಿನ ಬೆಳ್ಮಣ್ ರೋಟರಿ ಕ್ಲಬ್ನ ವತಿಯಿಂದ ರೋಟರಿ ಸೌಹಾರ್ದ ಸಮ್ಮಿಲನ ಕಾರ್ಯಕ್ರಮವು ಬೆಳ್ಮಣ್ ರೋಟರಿ ಅಧ್ಯಕ್ಷ ಸೂರ್ಯಕಾಂತ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬೆಳ್ಮಣ್ ಗ್ರಾ.ಪಂ. ಮಿನಿ ವಿಧಾನಸೌಧದಲ್ಲಿ ಇತ್ತೀಚೆಗೆ ಜರುಗಿತು. ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3180 ಇದರ ಮಾಹಿತಿ ಹಕ್ಕಿನ ಸಮಿತಿಯ ಜಿಲ್ಲಾಧ್ಯಕ್ಷ ಬಿ. ಪುಂಡಲೀಕ ಮರಾಠೆ, ಸಾಮಾಜಿಕ ಕಾರ್ಯಕರ್ತ ನವೀನ್ ಶೆಟ್ಟಿ, ರಾಘವೇಂದ್ರ ಶೆಟ್ಟಿಗಾರ್, ಜೀತೇಶ್, ಬೋಳ ಪಿಲಿಯಾರು ರೋಟರಿ ಸಮುದಾಯ ದಳದ ಪ್ರತಿನಿಧಿ ಸುಕೇಶ್ ಕುಮಾರ್ ಇದ್ದರು. ಸಂದೀಪ್ ವಿ. ಪೂಜಾರಿ ನಿರೂಪಿಸಿದರು. ವಿಘ್ನೇಶ್ ಶೆಣೈ ವಂದಿಸಿದರು.
ಭಜನಾ ಮಂಡಳಿ ವಲಯ ಪದಾಧಿಕಾರಿಗಳ ಆಯ್ಕೆ
ಉಡುಪಿ: ಇಲ್ಲಿನ ಭಜನಾ ಮಂಡಳಿಗಳ ಒಕ್ಕೂಟದ ಬ್ರಹ್ಮಾವರ ವಲಯಕ್ಕೆ ಪದಾಧಿಕಾರಿಗಳ ಆಯ್ಕೆಯು ಇತ್ತೀಚಿಗೆ ಜರುಗಿತು. ಬ್ರಹ್ಮಾವರ ವಲಯಾಧ್ಯಕ್ಷರಾಗಿ ಪಟ್ಟಾಭಿರಾಮ ಸೋಮಯಾಜಿ ಸಾಲಿಗ್ರಾಮ, ಉಪಾಧ್ಯಕ್ಷರಾಗಿ ಸರ್ಪು ಸದಾನಂದ ಪಾಟೀಲ, ಶಿವರಾಮ ಶೆಟ್ಟಿ ಕುರುಡಿಂಜೆ, ಅಣ್ಣಯ್ಯ ಸಾಲ್ಯಾನ್ ಕನ್ನಾರು, ಟಿ. ವಿಶ್ವನಾಥ್ ಪೈ ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಶೆಟ್ಟಿ ಎಳ್ಳಂಪಳ್ಳಿ, ಸಹ ಕಾರ್ಯದರ್ಶಿಗಳಾಗಿ ರಘುರಾಮ್ ಬೈಕಾಡಿ, ಸಂತೋಷ್ ಹೆಗ್ಡೆ ಕುಕ್ಕೆಹಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಕುಂದರ್ ಕೋಟತಟ್ಟು, ಸಹ ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್ ಆಚಾರ್, ಕೋಶಾಧಿಕಾರಿಯಾಗಿ ಸುಧೀರ್ ಶೆಟ್ಟಿ ನೀಲಾವರ ಹಾಗೂ 15 ಮಂದಿ ಸಮಿತಿ ಸದಸ್ಯರು ಆಯ್ಕೆಯಾಗಿದ್ದಾರೆ.