ನವೀನ್ ಪೇಜಾವರ ಟ್ರಸ್ಟ್ ನಿಧಿ ಹಸ್ತಾಂತರ
ಉಡುಪಿ: ಅಮೆರಿಕಾ ನಿವಾಸಿ ದಿನೇಶ್ ಪೇಜಾವರ ಅವರು ಗತಿಸಿದ ತಮ್ಮ ಮಗನ ಸ್ಮರಣಾರ್ಥ ನವೀನ್ ಪೇಜಾವರ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಬಡವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಇಂತಹದ್ದೆ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಉಡುಪಿ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಷಕ್ ಅವರು ಇತ್ತೀಚೆಗೆ ತಮ್ಮ ದೇಣಿಗೆ ಹಸ್ತಾಂತರಿಸಿದರು.
ಈ ವರ್ಷದ ದೇಣಿಗೆಯಾಗಿ ಅವರು ಸಮರ್ಪಿಸಿದ ರು. 30,000 ವನ್ನು 12 ಫಲಾನುಭವಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಟ್ರಸ್ಟ್ನ ವಿಶ್ವಸ್ಥರಾದ ವೃಂದಾ ಪೇಜಾವರ ಮತ್ತು ಮಾಲತಿ ರಾವ್ ಇದ್ದರು. ರಾಮದಾಸ್ ಚಾರಿಟೇಬಲ್ ಟ್ರಸ್ಟ್ನ ವಿಶ್ವಸ್ಥರಾದ ಮೀರಾ ಭಟ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿ ಸಂಸ್ಥೆಯ ಕಾರ್ಯಚಟುವಟಿಕೆ ವಿವರಿಸಿದರು. ವಿದ್ಯಾಪೋಷಕ್ ಕೋಶಾಧಿಕಾರಿ ಪ್ರೊ.ಕೆ. ಸದಾಶಿವ ರಾವ್ ವಂದಿಸಿದರು.