ಶಾಂತಿಧಾಮ ಗುರುಕುಲದಲ್ಲಿ ಬಿಲ್ವವೃಕ್ಷ ಆಂದೋಲನ
ಕೋಟೇಶ್ವರ: ಇಲ್ಲಿಗೆ ಸಮೀಪದ ಶಾಂತಿಧಾಮ ಪೂರ್ವ ಗುರುಕುಲದಲ್ಲಿ ಇತ್ತೀಚೆಗೆ ಗ್ರೀನ್ ಇಂಡಿಯಾ ಮೂವ್ ಮೆಂಟ್ ಟ್ರಿನ ಬಿಲ್ವವೃಕ್ಷ ಆಂದೋಲನದ ಅಂಗವಾಗಿ ಬಿಲ್ವ ಸಸಿಗಳನ್ನು ನೆಡಲಾಯಿತು.
ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರ ಕುಂಭಾಷಿ ಬಿಲ್ವ ಸಸಿಯನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಂತಿಧಾಮ ಪೂರ್ವ ಗುರುಕುಲದ ಆಡಳಿತ ವಿಶ್ವಸ್ಥ ಕೃಷ್ಣರಾಯ ಶಾನುಭಾಗ್, ಬಿಲ್ವ ವೃಕ್ಷ ಆಂದೋಲನದ ಸಂಚಾಲಕ ಕೆ. ಮೋಹನ ಆಚಾರ್ಯ ಕೋಟೇಶ್ವರ, ಕುಂದಾಪುರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ದತ್ತಾತ್ರೇಯ ನಾಯ್ಕ್, ಗ್ರೀನ್ ಇಂಡಿಯಾ ಮೂವ್ಮೆಂಟ್ನ ವಿಶ್ವಸ್ಥ ಸಂತೋಷ ಕೋಣಿ, ಕುಂದಾಪುರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕುಸುಮಾಕರ ಶೆಟ್ಟಿ, ಸೇವಾ ಸಂಗಮ ವಿದ್ಯಾಕೇಂದ್ರದ ಪ್ರಮುಖ ತೆಕ್ಕಟ್ಟೆ ರಾಮಚಂದ್ರ ಆಚಾರ್ ಇನ್ನಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಬಿಲ್ವ ವೃಕ್ಷದ ಮಹತ್ವ ಹಾಗೂ ಪೋಷಣೆಯ ಅವಶ್ಯಕತೆ ತಿಳಿಸಲಾಯಿತು.