ಗ್ರಾ.ಪಂ. ಉಪಚುನಾವಣೆ: 32ರಲ್ಲಿ 21 ಸ್ಥಾನ ಮಹಿಳೆಯರಿಗೆ
ಉಡುಪಿ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾರಣಾಂತರಗಳಿಂದ ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಆ. 5ರಂದು ಚುನಾವಣೆ ನಡೆದಿದ್ದು, ಬುಧವಾರ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆದು, ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.
ಉಡುಪಿ ತಾಲೂಕಿನ 7 ಸ್ಥಾನ, ಕುಂದಾಪುರ ತಾಲೂಕಿನ 16 ಸ್ಥಾನ ಮತ್ತು ಕಾರ್ಕಳ ತಾಲೂಕಿನ 9 ಸ್ಥಾನಗಳು ಸೇರಿ ಒಟ್ಟು 32 ಸದಸ್ಯ ಸ್ಥಾನಗಳಿಗೆ ಈ ಚುನಾವಣೆಗಳು ನಡೆದಿದ್ದವು. ಅವುಗಳಲ್ಲಿ ಅರ್ಧಕ್ಕೂ ಹೆಚ್ಚು ಅಂದರೆ 21 ಮಂದಿ ಮಹಿಳೆಯರು ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕಾರ್ಕಳ ತಾಲೂಕು: ಇನ್ನಾ ಗ್ರಾ.ಪಂ.ನ ಇನ್ನಾ 2ನೇ ವಾರ್ಡ್ (ಹಿ.ವ.ಅ.ಮಹಿಳೆ)- ಸುಲೋಚನಾ ಜಗನ್ನಾಥ ಪೂಜಾರಿ, ಈದು ಗ್ರಾ.ಪಂ.ನ ಈದು 2ನೇ ವಾರ್ಡ್ (ಹಿ.ವ.ಅ. ಮಹಿಳೆ) - ಲಾವಣ್ಯ, ಕಚ್ಚೂರು ಗ್ರಾ.ಪಂ.ನ ಬೆಳಂಜೆ 1ನೇ ವಾರ್ಡ್ (ಮಹಿಳೆ) - ಸುಮತಿ ಬೀದಿಬೆಟ್ಟು, ಮಾಳ ಗ್ರಾ.ಪಂ.ನ ಮಾಳ 1ನೇ ವಾರ್ಡ್ (ಪ.ಪಂ.ಮಹಿಳೆ) - ಶ್ವೇತಾ ಕೇಶವ ನಾಯ್ಕ್, ಮರ್ಣೆ ಗ್ರಾ.ಪಂ.ನ ಹೆರ್ಮುಂಡೆ 1ನೇ ವಾರ್ಡ್ (ಮಹಿಳೆ) - ರಾಧಿಕಾ ರೆಂಜದಮನೆ, ಮುಡಾರು ಗ್ರಾ.ಪಂ.ನ ಮುಡಾರು 2ನೇ ವಾರ್ಡ್ (ಮಹಿಳೆ) - ವಿನಯ ದಿನೇಶ ಬಂಗೇರ, ನಿಟ್ಟೆ ಗ್ರಾ.ಪಂ.ನ ನಿಟ್ಟೆ 2ನೇ ವಾರ್ಡ್ (ಹಿ.ವ.ಅ.ಮಹಿಳೆ) - ವಾರಿಜ ಪದ್ಮನಾಭ ಸಾಲ್ಯಾನ್.
ಅವಿರೋಧ ಆಯ್ಕೆ: ಬೈಲೂರು ಗ್ರಾ.ಪಂ.ನ ಕೌಡೂರು 2ನೇ ವಾರ್ಡ್ (ಹಿ.ವಂ.ಅ.) - ಜಗದೀಶ ಸಂಕಯ್ಯ ಪೂಜಾರಿ, ಎರ್ಲಪಾಡಿ ಗ್ರಾ.ಪಂ.ನ ಎರ್ಲಪಾಡಿ 3ನೇ ವಾರ್ಡ್ (ಪ.ಜಾ.ಮಹಿಳೆ) - ರಜನಿ ಅಣ್ಣಪ್ಪ.